ಅತಂತ್ರ ಸ್ಥಿತಿಯಲ್ಲಿ ಕೂಲಿ ಕಾರ್ಮಿಕರು: ಒಂದೊತ್ತಿನ ಊಟಕ್ಕೂ ಪರದಾಟ - ಕೊರೊನಾ ವೈರಸ್
🎬 Watch Now: Feature Video
ಕೊರೊನಾ ಲಾಕ್ಡೌನ್ ಹಿನ್ನೆಲೆ ಉಡುಪಿ ಜಿಲ್ಲೆಗೆ ವಲಸೆ ಬಂದಿದ್ದ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರದ ರೇಷನ್ ಕೂಡಾ ಸಿಗದ ಹಿನ್ನೆಲೆ ತಮ್ಮ ಹುಟ್ಟೂರಿಗೆ ಹೊರಡಲು ನಿನ್ನೆ ಸುಮಾರು 30ರಿಂದ 40 ವಾಹನಗಳಲ್ಲಿ ಸಾವಿರಕ್ಕೂ ಅಧಿಕ ಜನರು ಪ್ರಯಾಣ ಬೆಳೆಸಿದ್ದರು. ಉಡುಪಿಯ ಗಡಿ ಭಾಗದ ಶಿರೂರಿನಲ್ಲಿ ಅವರನ್ನು ತಡೆದು ಲಾಠಿ ಚಾರ್ಚ್ ಮಾಡಿ ವಾಪಸ್ ಕಳುಹಿಸಲಾಗಿತ್ತು. ಸದ್ಯ ನಗರದ ಮಧ್ಯ ಭಾಗದ ಬೀಡಿನಗುಡ್ಡೆ ಮೈದಾನದಲ್ಲಿ ಜಮಾಯಿಸಿರುವ ಕಾರ್ಮಿಕರು, ಸೂಕ್ತ ವ್ಯವಸ್ಥೆ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ.