ಪಾತ್ರೆ ತೊಳೆದು ಅಡುಗೆ ಮನೆ ಸ್ವಚ್ಛಗೊಳಿಸಿ ಯುಗಾದಿ ಆಚರಿಸಿದ ಮರಿ ಟೈಗರ್ - vinod prabhakar
🎬 Watch Now: Feature Video
ಕೊರೊನಾ ವೈರಸ್ ಎಫೆಕ್ಟ್ನಿಂದ ಸ್ಯಾಂಡಲ್ವುಡ್ ಸ್ಟಾರ್ಗಳ ದಿನಚರಿಯೇ ಬದಲಾಗಿದೆ. ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಮೂಡ್ನಲ್ಲಿ ಮನೆ ಸೇರಿದ್ದಾರೆ.ಯುಗಾದಿ ಹಬ್ಬವನ್ನು ಕುಟುಂಬದವರ ಜೊತೆ ಸರಳವಾಗಿ ಮನೆಯಲ್ಲಿ ಆಚರಿಸ್ತಿದ್ದಾರೆ. ನಟ ವಿನೋದ್ ಪ್ರಭಾಕರ್ ಮನೆಯಲ್ಲಿ ಮಡದಿಗೆ ಸಹಾಯ ಮಾಡುತ್ತ ಯುಗಾದಿ ಹಬ್ಬವನ್ನು ತುಂಬಾ ವಿಭಿನ್ನವಾಗಿ ಆಚರಿಸಿದ್ದಾರೆ. ಅಡುಗೆ ಮನೆಯನ್ನ ಸ್ವಚ್ಛ ಮಾಡಿ ಪಾತ್ರೆ ತೊಳೆದು ಪತ್ನಿಗೆ ಮನೆಗೆಲಸದಲ್ಲಿ ಸಹಾಯ ಮಾಡುವ ಮೂಲಕ ಈ ಯುಗಾದಿ ಆಚರಿಸಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳಿಗೂ ಮನೆಯಲ್ಲೆ ಇದ್ದು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.