ಬ್ಯಾಂಕ್ ಸ್ಥಳಾಂತರ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ - ಬ್ಯಾಂಕ್ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
🎬 Watch Now: Feature Video
ದಾವಣಗೆರೆ: ತಾಲೂಕಿನ ಕಾಶಿಪುರ ಗ್ರಾಮದಲ್ಲಿ ಬ್ಯಾಂಕ್ ಸ್ಥಳಾಂತರವನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಏಳು ವರ್ಷಗಳಿಂದ ಕಾಶಿಪುರ ಗ್ರಾಮದಲ್ಲಿ ಇದ್ದ ಬ್ಯಾಂಕ್ಅನ್ನು ಇದ್ದಕ್ಕಿದ್ದಂತೆ ಪಕ್ಕದ ಗ್ರಾಮ ಲೋಕಿಕೆರೆಗೆ ಸ್ಥಳಾಂತರ ಮಾಡಲು ಮುಂದಾದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ವ್ಯಾವಹಾರ ನಡೆಸಲು ಬೇರೆ ಗ್ರಾಮಕ್ಕೆ ಹೋಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಬ್ಯಾಂಕ್ ಇಲ್ಲೇ ಉಳಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆದಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು, ಡಿಆರ್ ತುಕಡಿ ಸಿಬ್ಬಂದಿ ಮೊಕ್ಕಾ ಹೂಡಿದ್ದಾರೆ.