ಅರಕಲಗೂಡಿನಲ್ಲಿ ವೈಭವಯುತವಾಗಿ ನೆರವೇರಿದ ವಿಜಯದಶಮಿ ಮಹೋತ್ಸವ - ಹಾಸನ
🎬 Watch Now: Feature Video
ಹಾಸನ : ಅರಕಲಗೂಡಿನಲ್ಲಿ ವಿಜಯದಶಮಿ ಮಹೋತ್ಸವ ಅತ್ಯಂತ ವೈಭವಯುತವಾಗಿ ನೆರವೇರಿತು. ವಿವಿಧ ದೇವಾಲಯದ ದೇವತೆಗಳ ಉತ್ಸವ ಹಾಗೂ ಸ್ಥಬ್ದ ಚಿತ್ರಗಳು ಕೋಟೆ ದೊಡ್ಡಮ ವೃತ್ತದಲ್ಲಿ ಜಮಾಯಿಸಿದವು. ವಿವಿಧ ಮಠಾಧೀಶರು, ಶಾಸಕ ಎ.ಟಿ.ರಾಮಸ್ವಾಮಿ, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಗ್ರಾಮ ದೇವತೆ ದೇವಾಲಯದಲ್ಲಿ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಮೊದಲಿಗೆ ದೊಡ್ಡಮ ದೇವತೆ ಇದನ್ನು ಹಿಂಬಾಲಿಸಿ ಉಳಿದ ದೇವತೆಗಳ ಉತ್ಸಗಳು ಬನ್ನಿ ಮಂಟಪಕ್ಕೆ ತೆರಳಿತು. ಮಂಗಳ ವಾದ್ಯ, ಕೀಲು ಕುದುರೆ, ಚಂಡೇಮೇಳ, ಡೊಳ್ಳು ಕುಣಿತ, ವೀರಗಾಸೆ, ತಮಟೆವಾದ್ಯ, ಡಿಜೆ ಸೌಂಡ್ಸ್ ಮುಂತಾದ ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಜನರು ಆನಂದಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನ ಮರವಳಲು ಗ್ರಾಮದ ಬೆಂಗಳೂರು ಹೆಬ್ಬಾಳದ ಭಾರತೀಯ ಕೃಷಿ ತಾಂತ್ರಿಕ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ. ಜೆ. ಚಂದ್ರೇಗೌಡ ಅವರಿಗೆ 2019ರ ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.