ಕೊರೊನಾದಿಂದ ಸುಲಭವಾಗಿ ಪಾರಾಗುತ್ತಿದ್ದಾರೆ ಕ್ಯಾನ್ಸರ್ ರೋಗಿಗಳು... ವೈದ್ಯಲೋಕಕ್ಕೆ ಅಚ್ಚರಿ! - ಕೋವಿಡ್ ಪೀಡಿತ ಕ್ಯಾನ್ಸರ್ ರೋಗಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8590341-thumbnail-3x2-dd.jpg)
ವಿವಿಧ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕೊರೊನಾ ಮಾರಕವಾಗಿದೆ. ಅಲ್ಲದೆ ಅದೆಷ್ಟೋ ಜನ ರೋಗಿಗಳು ಸಾವನ್ನಪ್ಪಿದ್ದಾರೆ. ಆದ್ರೆ ಕ್ಯಾನ್ಸರ್ ರೋಗಿಗಳು ಮಾತ್ರ ಕೊರೊನಾ ಗೆದ್ದು ಬರುವ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಕೋವಿಡ್-19 ಆಸ್ಪತ್ರೆಯ 12 ಮಂದಿ ಕ್ಯಾನ್ಸರ್ ರೋಗಿಗಳು ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ 10 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದು ಜಿಲ್ಲೆಯ ವೈದ್ಯರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ ಅವರು ಕ್ಯಾನ್ಸರ್ ರೋಗಕ್ಕೆ ತೆಗೆದುಕೊಳ್ಳುತ್ತಿರುವ ಔಷಧಿಗಳು ಕೊರೊನಾದಿಂದ ಪಾರಾಗಲು ಸಹಕಾರಿಯಾಗುತ್ತಿವೆಯಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.