ಬಿರುಗಾಳಿ ಸಹಿತ ಮಳೆಗೆ ರಸ್ತೆ ಮೇಲೆ ಉರುಳಿದ ಮರಗಳು: ಪರದಾಡಿದ ಪ್ರಯಾಣಿಕರು - ನಾಗಮಂಗಲ ತಾಲ್ಲೂಕಿನ ಚುಂಚನಗಿರಿ ಸಮೀಪ ಧರೆಗೆ ಉರುಳಿದ ಮರಗಳು

🎬 Watch Now: Feature Video

thumbnail

By

Published : Oct 30, 2019, 8:51 PM IST

ಮಂಡ್ಯ: ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮರಗಳು ಬುಡಮೇಲಾದ ಘಟನೆ ನಾಗಮಂಗಲ ತಾಲೂಕಿನ ಚುಂಚನಗಿರಿ ಸಮೀಪ ನಡೆದಿದೆ. ಮರಗಳು ಧರೆಗೆ ಉರುಳಿದ ಪರಿಣಾಮ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಸ್ಥಳೀಯರ ನೆರವಿನಿಂದ ಮರಗಳನ್ನು ತೆರವುಗೊಳಿಸಿದರು. ನಂತರ ಸಂಚಾರ ಎಂದಿನಂತೆ ಸಾಗಿತು. ಈ ರಸ್ತೆಯಲ್ಲಿ ಮತ್ತಷ್ಟು ಮರಗಳು ಉರುಳುವ ಹಂತಕ್ಕೆ ಹೋಗಿದ್ದು, ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.