ಬೀದಿ ಬದಿಯ ಹಸುಗಳಿಗೆ ಮೇವು ನೀಡಿ ಮಾನವೀಯತೆ ಮೆರೆದ ಶ್ರೀರಾಮ ಸೇನೆ ಕಾರ್ಯಕರ್ತರು - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯವೇ ಲಾಕ್ಡೌನ್ ಆಗಿದೆ. ಆಹಾರವಿಲ್ಲದೆ ಪರದಾಡುತ್ತಿದ್ದ ಬೀದಿ ಬದಿಯ ಹಸುಗಳಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮೇವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವ್ಯಾಪಾರ-ವಾಹಿವಾಟು ನಡೆಯುತ್ತಿದ್ದ ವೇಳೆ ಮಾರುಕಟ್ಟೆಗಳಲ್ಲಿ ಸಿಗುತ್ತಿದ್ದ ತರಕಾರಿ, ಜನರು ಹಾಕುವ ಆಹಾರ ತಿಂದು ಜೀವನ ನಡೆಸುತ್ತಿದ್ದವು. ಆದ್ರೆ ಲಾಕ್ಡೌನ್ ಹಿನ್ನೆಲೆ ದನಕರುಗಳು ಆಹಾರವಿಲ್ಲದೆ ಪರದಾಡುತ್ತಿದ್ದವು. ಇದನ್ನರಿತ ಶ್ರೀರಾಮಸೇನೆ ಕಾರ್ಯಕರ್ತರು ಮೇವು ಹಾಕಿ ಅವುಗಳ ಹಸಿವನ್ನು ನೀಗಿಸಿದ್ದಾರೆ.