ಮನೆ ಮನೆಗೆ ತೆರಳಿ ಅಕ್ಕಿ ಬ್ಯಾಗ್ ವಿತರಿಸಿದ ಶಾಸಕ ಸೋಮಶೇಖರ ರೆಡ್ಡಿ - ಕೊರೊನಾ ಮುನ್ನೆಚ್ಚರಿಕೆ
🎬 Watch Now: Feature Video
ಬಳ್ಳಾರಿಯ ಹರಿಶ್ಚಂದ್ರ ನಗರದ ನಿವಾಸಿಗಳಿಗೆ ಅಕ್ಕಿ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಈ ವೇಳೆ, ಅಂದಾಜು 500 ಮನೆಗಳ ನಿವಾಸಿಗಳಿಗೆ ಅಕ್ಕಿ ಮೂಟೆಗಳನ್ನು ನೀಡಲಾಯ್ತು. ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿರುವ ಶಾಸಕ ಅಕ್ಕಿ ಮೂಟೆಗಳನ್ನು ಮಹಿಳೆಯರಿಗೆ ನೀಡಿದರು. ಇದೇ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರು ಜನರಲ್ಲಿ ಮನವಿ ಮಾಡಿದರು.