SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಕಲೇಶಪುರದ ಅವಳಿ ಸಹೋದರಿಯರು! - Saleshpur twin Sisters got Good marsk in SSLC
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8378167-591-8378167-1597140599773.jpg)
ಸಕಲೇಶಪುರ: ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅವಳಿ ಸಹೋದರಿಯರಾದ ರಿಯಾ ಸುಶ್ಮಿತಾ ಡಿಸೋಜ ಹಾಗೂ ರಿಶಾ ನಿಶ್ಮಿತಾ ಡಿಸೋಜ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ರಿಯಾ ಸುಶ್ಮಿತಾ ಡಿಸೋಜ 612 (97.92%) ಅಂಕ ಪಡೆದು ತಾಲೂಕಿಗೆ ಎರಡನೇ ಸ್ಥಾನ ಪಡೆದಿದ್ದು, ಆಕೆಯ ಅವಳಿ ಸಹೋದರಿ ರಿಶಾ ನಿಶ್ಮಿತಾ ಡಿಸೋಜ 595 (95.20 %) ಅಂಕ ಪಡೆದಿದ್ದಾಳೆ. ಮಧ್ಯಮ ಕುಟುಂಬದವರಾದ ಈ ಬಾಲಕಿಯರ ತಂದೆ ರೊನಾಲ್ಡ್ ಡಿಸೋಜ ಎಲೆಕ್ಟ್ರಿಕ್ ಗುತ್ತಿಗೆದಾರರಾಗಿದ್ದು, ತಾಯಿ ತಾರಾ ಮರಿಯ ಲೂಯಿಸ್ ಗೃಹಿಣಿಯಾಗಿದ್ದಾರೆ.