ಇಂದಿರಾ ಗಾಜಿನ ಮನೆಯಲ್ಲಿ ಆರ್ಎಸ್ಎಸ್ನಿಂದ ರಕ್ಷಾ ಬಂಧನ ಆಚರಣೆ - ಕಾರ್ಯಕರ್ತರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4147819-thumbnail-3x2-bangaloejpg.jpg)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ರಕ್ಷಾ ಬಂಧನವನ್ನು ಆಚರಣೆ ಮಾಡಿದರು. ಆರ್ಎಸ್ಎಸ್ ಕಾರ್ಯಕರ್ತರೆಲ್ಲರೂ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರದ ಸಂಚಾಲಕರಾದ ಶಿವಾನಂದ ಆವಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಗೌರವ ಕಡಿಮೆ ಆಗುತ್ತಿದೆ. ಶೋಷಣ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಪಣ ತೋಡಬೇಕು. ಸಮಾಜದಲ್ಲಿ ಸಂಸ್ಕಾರ ಸಂಘಟನ ಸೇವೆಗಳ ಮೂಲಕ ಬಲಾಢ್ಯ ಭಾರತವನ್ನು ಕಟ್ಟುವ ಸಂಕಲ್ಪ ಮಾಡಬೇಕು. ಪ್ರೀತಿ, ವಿಶ್ವಾಸ, ಸಹೋದರತೆ ಸಂಕೇತವಾದ ರಕ್ಷೆಯನ್ನು ಕಟ್ಟಿಕೊಳ್ಳುವ ಮೂಲಕ ಸಮಾಜ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.