ಗಣಿ ನಾಡಿಗೆ ವರುಣನ ಸಿಂಚನ: ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು - ಬಳ್ಳಾರಿ ಜಿಲ್ಮಲೆಯಲ್ಲಿ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8154959-111-8154959-1595598698309.jpg)
ಬಳ್ಳಾರಿ: ಜಿಲ್ಲೆಯ ನಾನಾ ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗಣಿ ನಾಡಿಗೆ ವರುಣನ ಸಿಂಚನದಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಬೀರಿದ್ದು, ಈ ಬಾರಿಯ ಕೃಷಿ ಉತ್ತಮವಾಗಲಿದೆ ಎಂಬ ಸಂತಸದಲ್ಲಿದ್ದಾರೆ. ಕೂಡ್ಲಿಗಿ ತಾಲೂಕಿನ ನಿಂಗದಹಳ್ಳಿ ತಾಂಡದ ಹಳ್ಳ-ಕೊಳ್ಳಗಳು ಹಾಗೂ ಸಂಡೂರು ತಾಲೂಕಿನ ತಾರಾನಗರದ ಮಾನಸ ಸರೋವರ ಖ್ಯಾತಿಯ ನಾರಿಹಳ್ಳ ಕೂಡ ತುಂಬಿ ಹರಿಯುತ್ತಿದೆ. ಬಿಸಿಲಿನ ಬೇಗೆಯಿಂದ ದಣಿದಿದ್ದ ಜನರಿಗೆ ವರುಣರಾಯ ತಂಪೆರೆದಿರುವುದು ಜನರಲ್ಲಿ ಸಂತಸ ತಂದಿದೆ.