ಕೊರೊನಾ ಸೋಂಕಿತರಿಗೆ ಆಶ್ರಯ ನೀಡಬೇಡಿ ಎಂದು ಆಗ್ರಹಿಸಿ ಕುಮಟಾದಲ್ಲಿ ಪ್ರತಿಭಟನೆ - ಕೊರೊನಾ ಸೋಂಕಿತರಿಗೆ ಆಶ್ರಯ ನೀಡಬೇಡಿ ಎಂದು ಆಗ್ರಹಿಸಿ ಕುಮಟಾದಲ್ಲಿ ಪ್ರತಿಭಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6520666-thumbnail-3x2-kwr.jpg)
ಕಾರವಾರ: ಕೊರೊನಾ ಸೋಂಕಿತರಿಗೆ ನಮ್ಮೂರಿನಲ್ಲಿ ಆಶ್ರಯ ನೀಡಬೇಡಿ ಎಂದು ವಸತಿ ಶಾಲೆಗೆ ಮಂಚ, ಹಾಸಿಗೆಗಳನ್ನು ಕೊಂಡೊಯ್ಯುತ್ತಿದ್ದ ವಾಹನಗಳನ್ನು ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಘಟನೆ ಕುಮಟಾದಲ್ಲಿ ನಡೆಯಿತು. ಕುಮಟಾ ತಾಲೂಕಿನ ಹೆಗಡೆಯ ತಣ್ಣೀರಕುಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೊರೊನಾ ಶಂಕಿತರನ್ನು ತಂದು ಶುಶ್ರೂಷೆ ಮಾಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿತ್ತು. ಆದರೆ, ವಿಷಯ ತಿಳಿದು ಗಾಬರಿಗೊಂಡ ಹೆಗಡೆ ಪಂಚಾಯಿತಿ ವ್ಯಾಪ್ತಿಯ ನೂರಾರು ಜನರು ವಾಹನಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಜನರು ಒಪ್ಪದಿದ್ದಾಗ ಪೊಲೀಸರು ಜನರನ್ನು ಗದರಿಸಿ ಚದುರಿಸಿದರಲ್ಲದೇ ಮಂಚ ಹಾಗೂ ಹಾಸಿಗೆ ಸಾಗಣೆಗೆ ಅನುವು ಮಾಡಿಕೊಟ್ಟರು.