ಮೈಸೂರಲ್ಲಿ ಗಮನ ಸೆಳೆದ ಸಾಮೂಹಿಕ ಗಣಪ ನಿಮಜ್ಜನ ಮೆರವಣಿಗೆ - Mysuru news
🎬 Watch Now: Feature Video
ಮೈಸೂರು: ನಗರದ ವಿವಿಧ ಪ್ರದೇಶಗಳಲ್ಲಿ ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳ ಸಾಮೂಹಿಕ ನಿಮಜ್ಜನ ಮೆರವಣಿಗೆ ನಡೆಯಿತು. ಸಾಮೂಹಿಕ ವಿನಾಯಕ ವಿಸರ್ಜನೆ ಮಂಡಳಿ ಏರ್ಪಡಿಸಿದ್ದ ಮೆರವಣಿಗೆಗೆ ವೀರನಗೆರೆ ಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಬಳಿಕ ಅಶೋಕ ರಸ್ತೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಗಾಂಧಿ ವೃತ್ತ, ಡಿ.ದೇವರಾಜು ಅರಸು ರಸ್ತೆ, ನಾರಾಯಣ ಶಾಸ್ತ್ರಿ, ನೂರಾಡಿ ರಸ್ತೆ, ಕೆ.ಆರ್.ಎಸ್ ರಸ್ತೆ ಮಾರ್ಗವಾಗಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ನಿಮಜ್ಜನ ಮಾಡಲಾಯಿತು. ಮೆರವಣಿಗೆ ವೇಳೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.