ನೆರೆ ಪರಿಹಾರ ಅಂದ್ರೆ ಗರಂ ಆದ ಸಚಿವರು : ಸಿಎಂ ಮನಸ್ಥಿತಿ ನನಗೇನಪ್ಪ ಗೊತ್ತು ಎಂದ ಮಾಧುಸ್ವಾಮಿ - Hubli latest news
🎬 Watch Now: Feature Video
ಹುಬ್ಬಳ್ಳಿಯ ನವನಗರದಲ್ಲಿ ನಿರ್ಮಾಣವಾದ ಕರ್ನಾಟಕ ರಾಜ್ಯ ಕಾನೂನು ವಿವಿಯ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಬಿಎಸ್ ವೈ 'ತಂತಿ' ಮೇಲಿನ ನಡುಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಯಾವ ವಿಚಾರವಾಗಿ ಆ ರೀತಿ ಹೇಳಿದ್ದರೋ ಗೊತ್ತಿಲ್ಲ. ಆ ಪ್ರಶ್ನೆ ಅವರಿಗೇ ಕೇಳಬೇಕು ಎಂದರು. ಕೇಂದ್ರ ಸರ್ಕಾರದಿಂದ ಈವರೆಗೆ ನೆರೆ ಪರಿಹಾರ ಬಿಡುಗಡೆಯಾಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿಯೇ ಸಚಿವರು ಉತ್ತರಿಸಿದರು. ಮಹದಾಯಿ ವಿಚಾರವಾಗಿ ನೋಟಿಫಿಕೇಷನ್ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.