ಕುಡಚಿ ಸೇತುವೆ ಜಲಾವೃತ: ಕರ್ನಾಟಕ-ಮಹಾರಾಷ್ಟ್ರ ರಸ್ತೆ ಸಂಪರ್ಕ ಕಡಿತ - ಚಿಕ್ಕೋಡಿ ಉಪವಿಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಕುಡಚಿ ಸೇತುವೆ ಜಲಾವೃತ
🎬 Watch Now: Feature Video
ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಕುಡಚಿ ಸೇತುವೆ ಜಲಾವೃತಗೊಂಡಿದ್ದು ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಕಾಗಾವಾಡ ತಾಲೂಕಿನ ಉಗಾರ-ಕುಡಚಿ ನಡುವೆ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಅಂದಾಜು ಎರಡು ಅಡಿ ನೀರು ಹರಿಯುತ್ತಿದ್ದು, ಈ ಸೇತುವೆ ಮಹಾರಾಷ್ಟ್ರ-ಕರ್ನಾಟಕದ ಕೊಂಡಿಯಾಗಿ ಸಂಚರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು.