ಬಾಗಿಲು ತೆರೆದ ದೇವಸ್ಥಾನಗಳು: ಕದ್ರಿ ಮಂಜುನಾಥನ ದರ್ಶನ ಪಡೆದ ಮುಜರಾಯಿ ಸಚಿವರು - ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

🎬 Watch Now: Feature Video

thumbnail

By

Published : Jun 8, 2020, 10:15 AM IST

ಲಾಕ್​ಡೌನ್ ಬಳಿಕ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳು ಇಂದಿನಿಂದ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಗೇಟ್​ನಲ್ಲಿ ತಾಪಮಾನ ಪರೀಕ್ಷೆ ನಡೆಸಿಕೊಂಡು, ಸ್ಯಾನಿಟೈಸರ್ ಬಳಸಿ ದೇವಸ್ಥಾನ ಪ್ರವೇಶಿಸಿದರು. ದೇವಾಲಯದಲ್ಲಿದ್ದ ಮಹಾಗಣಪತಿ, ದುರ್ಗಾಪರಮೇಶ್ವರಿ, ಗೋಮುಖ ಗಣಪತಿ ದರ್ಶನ ಪಡೆದು, ಮಂಜುನಾಥ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ದಿವಾಕರ್ ಸೇರಿದಂತೆ ಅನೇಕರು ಸಚಿವರಿಗೆ ಸಾಥ್​ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.