ಬೀದರ್ ಪ್ರಜೆಗಳು ಬದಲಾವಣೆ ಬಯಸಿದರೆ ಪ್ರಜಾಕೀಯ ಪ್ರಬಲವಾಗಲಿದೆ : ಉಪೇಂದ್ರ - undefined
🎬 Watch Now: Feature Video
ಬಯಲು ಸೀಮೆಯ ಜನ ಬದಲಾವಣೆ ಬಯಸಿದ್ದಲ್ಲಿ ಮಾತ್ರ ಪ್ರಜಾಕೀಯ ಪ್ರಬಲವಾಗಿ ಗೆಲುವು ಸಾಧಿಸಲಿದೆ. ಜನರ ಯೋಚನೆ ಮೇಲೆ ಚುನಾವಣೆ ಮಾಡುವ ಅಗತ್ಯವಿದೆ. ರಾಜಕೀಯ ಹೊರತಾಗಿ ಚುನಾವಣೆ ಮಾಡಲು ಹೊರಟಿರುವ ಪ್ರಜಾಕೀಯ ಪಕ್ಷದ ಪ್ರಜೆಗಳ ಗೆಲುವಿಗಾಗಿ ಬೀದರ್ ಜನ ಸಹಕರಿಸಬೇಕು. ಸಾಮಾಜಿಕ ಜಾಲತಾಣ, ಮಾಧ್ಯಮ, ಮನೆ ಮನೆ ಮತಯಾಚನೆ ಮೂಲಕ ಜನರ ಮನೆ ಬಾಗಿಲಗೆ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಟ ಉಪೇಂದ್ರ ತಿಳಿಸಿದರು. ಅವರು ಬೀದರ್ನಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅಂಬರೀಶ ಕೆಂಚಾ ಪರ ಪ್ರಚಾರ ಮಾಡಿದರು.