ಮಹದಾಯಿ ವಿಚಾರದಲ್ಲಿ ಮತ್ತೆ ಅಡೆತಡೆ ಬರುವ ಲಕ್ಷಣಗಳು ಕಾಣಿಸುತ್ತಿವೆ: ಹೆಚ್.ಕೆ.ಪಾಟೀಲ್ - ಮಹದಾಯಿ ಯೋಜನೆ ಪಾಟೀಲ್ ಹೇಳಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6180346-thumbnail-3x2-chikk.jpg)
ಗದಗ: ಕೇಂದ್ರ ಹಾಗೂ ಗೋವಾ ಸರ್ಕಾರಗಳಿಂದ ಮಹದಾಯಿ ಯೋಜನೆಗೆ ಮತ್ತೆ ಅಡ್ಡಿ ಉಂಟಾಗಬಹುದು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಮತ್ತೆ ಅಡೆತಡೆ ಬರುವ ಲಕ್ಷಣಗಳು ಕಾಣಿಸುತ್ತಿವೆ. ದುರ್ದೈವ ಅಂದ್ರೆ ಒಕ್ಕೂಟ ವ್ಯವಸ್ಥೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅನ್ಯಾಯ ಸೃಷ್ಟಿ ಮಾಡೋದು ಯಾವ ರಾಜ್ಯಕ್ಕೂ ಶೋಭೆ ತರಲ್ಲ. ಗೋವಾ ರಾಜ್ಯಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ. ಈ ರೀತಿ ತಕರಾರು, ಜಗಳಕ್ಕೆ ದಾರಿ ಮಾಡಿಕೊಡುವುದು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.