ಐತಿಹಾಸಿಕ ಬೆಂಗಳೂರು ಕರಗಕ್ಕೂ ಕೊರೊನಾ ಆತಂಕ... - coronavirus attack
🎬 Watch Now: Feature Video
ಬೆಂಗಳೂರು: ಟೆಕ್ಕಿ ಸೇರಿದಂತೆ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಐತಿಹಾಸಿಕ ಬೆಂಗಳೂರು ಕರಗಕ್ಕೂ ಕೊರೊನಾ ಆತಂಕ ಎದುರಾಗಿದೆ. ಹೀಗಾಗಿ ಉತ್ಸವ ಯಾವ ರೀತಿ ಆಚರಿಸಬೇಕು ಎಂಬ ಗೊಂದಲ ಮುಜರಾಯಿ ಇಲಾಖೆ ಅಧಿಕಾರಿಗಳಲ್ಲಿದೆ. ಕರಗ ಉತ್ಸವ ಮಾ.31ರಿಂದ ಎಪ್ರಿಲ್ 8ರವರೆಗೂ ನಡೆಯಲಿದೆ. ಸ್ಥಳೀಯ ಶಾಸಕರು ಆರೋಗ್ಯ ಇಲಾಖೆ, ಬಿಬಿಎಂಪಿ, ಪೊಲೀಸ್ ಇಲಾಖೆ, ಮುಜರಾಯಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನ ಮಾಡುವ ಚಿಂತನೆ ಹೊಂದಿದ್ದಾರೆ. ಈ ಕುರಿತು ಧರ್ಮರಾಯ ದೇವಸ್ಥಾನ ಸಮಿತಿ ಸದಸ್ಯರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.