ಶಿವಮೊಗ್ಗದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ - ಶಿವಮೊಗ್ಗ ಸುದ್ದಿ
🎬 Watch Now: Feature Video
ಶಿವಮೊಗ್ಗದಲ್ಲಿ ರಾತ್ರಿ ಭಾರೀ ಮಳೆ ಸುರಿದಿದೆ. ರಾತ್ರಿ ಸುಮಾರು 9:30ರ ವೇಳೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು. ಮಳೆಯಿಂದ ಚರಂಡಿಗಳೆಲ್ಲಾ ತುಂಬಿ ಮಳೆ ನೀರು ರಸ್ತೆಯ ಮೇಲ್ಲೂ ಹರಿದಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಏಕಾಏಕಿ ಸುರಿದ ಮಳೆಯಿಂದ ರಸ್ತೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿತ್ತು.