ಬಿಸಿಲಿನಿಂದ ಕಾದ ಕಾವಲಿಯಾಗಿದ್ದ ಕಾರವಾರಕ್ಕೆ ತಂಪೆರದ ಮಳೆ.. - Heavy rain on the coast

🎬 Watch Now: Feature Video

thumbnail

By

Published : May 3, 2020, 10:22 AM IST

ಬಿಸಿಲಿಗೆ ಕಾದು ಕಂಗಾಲಾಗಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭರ್ಜರಿ ಮಳೆಯಾಗಿದೆ. ಸಂಜೆ 8ರ ವೇಳೆಗೆ ಸುಮಾರು ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಕೂಲ್‌ ಕೂಲ್ ಆಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕುಮಟಾ ಹಾಗೂ ಅಂಕೋಲಾ ಸೇರಿ ಕರಾವಳಿಯ ಕೆಲ ತಾಲೂಕುಗಳಲ್ಲೂ ಮಳೆ ಸುರಿದಿದ್ದರೂ ಸಹ ಕಾರವಾರದಲ್ಲಿ ಮಳೆಯಾಗಿರಲಿಲ್ಲ. ಇದರಿಂದಾಗಿ ನಗರ ಪ್ರದೇಶದಲ್ಲಿ ತಾಪಮಾನ ಏರಿಕೆ ಕಂಡಿದೆ. ಜನ ಬಿಸಿಲಿನ ಬೇಗೆಯಿಂದಾಗಿ ತತ್ತರಿಸುವಂತಾಗಿತ್ತು. ಸದ್ಯ ಕೆಲವೇ ಸಮಯ ಮಳೆ ಸುರಿದಿದ್ದರೂ ಸಹ ನಗರದಲ್ಲಿ ತಂಪು ವಾತಾವರಣ ಆವರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.