ನರಳಾಡಿ ಪ್ರಾಣಬಿಟ್ಟ ಗಜರಾಜ... ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ - ಬಿಬಿಟಿಸಿ ಸಂಸ್ಥೆ
🎬 Watch Now: Feature Video
ಸಾವು-ಬದುಕಿನ ನಡುವೆ ನರಳುತ್ತಿರುವ ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಹಿಂದೇಟು ಹಾಕಿದ ಹಿನ್ನೆಲೆ ಕೊನೆಗೂ ಗಜರಾಜ ನರಳಾಡುತ್ತಾ ಪ್ರಾಣಬಿಟ್ಟ ಘಟನೆ ವಿರಾಜಪೇಟೆ ತಾಲೂಕಿನ ಬಿಬಿಟಿಸಿ ಸಂಸ್ಥೆಯ ತೋಟದಲ್ಲಿ ನಡೆದಿದೆ. ಬಿಬಿಟಿಸಿ ಸಂಸ್ಥೆಗೆ ಸೇರಿದ ಬಾಡ ಬಾನಂಗಲ ತೋಟದಲ್ಲಿ ಕಾಡಾನೆಯೊಂದು ಅನಾರೋಗ್ಯ ಹಾಗೂ ಬಲ ಭಾಗದ ಕಾಲಿಗೆ ಗಾಯವಾಗಿ ನರಳಾಡುತ್ತಿತ್ತು. ಕಾಡಾನೆ ನರಳಾಟ ಕೇಳಿದ ತೋಟದ ಕಾರ್ಮಿಕರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಆದರೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತಡವಾಗಿ ಬಂದು ಪರಿಶೀಲಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಆನೆ ಪ್ರಾಣ ಬಿಟ್ಟಿದೆ.
Last Updated : Sep 4, 2019, 8:23 PM IST