ಹೆಚ್ಚುತ್ತಿರುವ ಕೊರೊನಾ ಪ್ರಕರಣ; ಕೊಪ್ಪಳ ಜನರಲ್ಲಿ ಭೀತಿ
🎬 Watch Now: Feature Video
ಕೊಪ್ಪಳ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಹೆಚ್ಚಿಸಿದೆ. ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣದಲ್ಲಿನ ಕೀರ್ತಿ ಕಾಲೋನಿ, ಧನ್ವಂತರಿ ಕಾಲೋನಿ, ಯತ್ನಟ್ಟಿ ರಸ್ತೆಯ ಟ್ಯಾಂಕ್ ಏರಿಯಾ, ಓಜಿನಹಳ್ಳಿ ರಸ್ತೆ ಪ್ರದೇಶ, ಅಡವಿ ಆಂಜನೇಯ ದೇವಸ್ಥಾನ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಭಾಗ್ಯನಗರ ಪಟ್ಟಣದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮನೆಯಿಂದ ಹೊರಬರಲು ಸಹ ಜನ ಹೆದರುತ್ತಿದ್ದಾರೆ. ಈ ನಡುವೆ ಕೊಪ್ಪಳ ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಕಡೆ ಜನರು ಭಯದ ನಡುವೆಯೂ ಗುಂಪು-ಗುಂಪಾಗಿ ಓಡಾಡ್ತಿರೋದು ಕಂಡು ಬರುತ್ತಿದೆ. ಜಿಲ್ಲೆಯ ಸದ್ಯದ ಪರಿಸ್ಥಿತಿ ಕುರಿತ ವಿವರಣೆ ಇಲ್ಲಿದೆ.
Last Updated : Jul 15, 2020, 9:16 PM IST