ಹಾವೇರಿಯಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖ: ನಿಟ್ಟುಸಿರು ಬಿಟ್ಟ ಜನತೆ - ಹಾವೇರಿಯಲ್ಲಿ ಕೊರೊನಾ ಸೋಂಕಿತರು ಗುಣಮುಖ
🎬 Watch Now: Feature Video
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮೂರಕ್ಕೆ ಇಳಿದಿದೆ. ಆರು ಜನರಲ್ಲಿ ಮೂವರು ಗುಣಮುಖರಾಗಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಈ ಮಧ್ಯೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿರುವ ಉಳಿದ ಮೂವರು ರೋಗಿಗಳು ಸಹ ಗುಣಮುಖರಾಗುತ್ತಿದ್ದಾರೆ. ಅವರಿಗೆ ಸರ್ಕಾರದ ನಿಯಮಾವಳಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್ ಕೇಸ್‌ಗಳು ಕಾಣಿಸಿಕೊಳ್ಳದಿರುವುದು ಜಿಲ್ಲೆಯ ಜನರಲ್ಲಿನ ಆತಂಕ ದೂರ ಮಾಡಿದೆ.