ಲಾರಿ-ಕಾರಿನ ನಡುವೆ ಅಪಘಾತ, ಮೂವರು ಅಪಾಯದಿಂದ ಪಾರು - ಎನ್ ಆರ್ ಪುರ ಅಪಘಾತ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4995769-thumbnail-3x2-jay.jpg)
ಚಿಕ್ಕಮಗಳೂರು: ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಮೂವರು ಅಪಾಯದಿಂದ ಪಾರಾಗಿರುವ ಘಟನೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಎಲೆಕಲ್ಲು ಗ್ರಾಮದ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಲಾರಿಯ ಮುಂಭಾಗದ ಚಕ್ರ ಕಳಚಿ ಬಿದ್ದಿದೆ. ಕಾರಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದ್ದು, ಏರ್ ಬ್ಯಾಗ್ ಓಪನ್ ಆದ ಕಾರಣದಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.