ಬಡವರಿಗೆ ಆಹಾರ ಕಿಟ್‌ ವಿತರಿಸಿದ ರಾಮನಗರದ ಚಕ್ಕೆರೆ ಗ್ರಾಮ ಪಂಚಾಯತ್​ - food to the poor

🎬 Watch Now: Feature Video

thumbnail

By

Published : Mar 31, 2020, 12:07 PM IST

ಲಾಕ್‌ಡೌನ್‌ ಕಾರಣ ನಿರ್ಗತಿಕರು ಹೊರ ರಾಜ್ಯದಿಂದ ಉದ್ಯೋಗವನ್ನರಸಿ ಬಂದ ಕುಟುಂಬಗಳಿಗೆ ಆಹಾರ ಸಮಸ್ಯೆ ಕಾಡತೊಡಗಿದೆ. ಇದನ್ನು ಮನಗಂಡ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯತ್​ ವತಿಯಿಂದ ಸುಮಾರು 150 ಕುಟುಂಬಗಳಿಗೆ ಆಹಾರದ ಕಿಟ್​ ವಿತರಿಸಿದೆ. ಕಿಟ್​/ಬ್ಯಾಗ್​ನಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಉರುಳಿ ಕಾಳು, ರವೆ ಹಾಗು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲಾಗಿದೆ. ಚಕ್ಕೆರೆ ಸೇರಿದಂತೆ ಆ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗವನ್ನರಸಿ ಬಂದಿರುವ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.