ಅಕ್ಕಪಕ್ಕ ಕುಳಿತಿದ್ದರೂ ಮಾತನಾಡಲಿಲ್ಲ ಅಶೋಕ್-ಅಶ್ವತ್ಥ್ ನಾರಾಯಣ್... ಇಬ್ಬರ ನಡುವೆ ಇದೆಯಾ ಮನಸ್ತಾಪ? - ಕೆ.ಆರ್.ಪೇಟೆ ಆರೋಗ್ಯ ಮೇಳ ಕಾರ್ಯಕ್ರಮ
🎬 Watch Now: Feature Video
ಮಂಡ್ಯ: ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದರೂ ಕೂಡ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಆರ್.ಅಶೋಕ್ ಒಬ್ಬರಿಗೊಬ್ಬರು ಮಾತನಾಡದಿರುವುದು ಕಂಡುಬಂತು. ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದ ಮೈದಾನದಲ್ಲಿ ನಡೆದ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಡಾ.ಅಶ್ವತ್ಥ್ ನಾರಾಯಣ್ ಹಾಗೂ ಆರ್.ಅಶೋಕ್ ಅವರು ಇಬ್ಬರು ತಮ್ಮ ಭಾಷಣದ ಆರಂಭದಲ್ಲಿ ಒಬ್ಬರಿಗೊಬ್ಬರು ಸ್ವಾಗತಕೋರಿದರು. ಆದರೆ ಬಳಿಕ ಕಾರ್ಯಕ್ರಮ ಮುಗಿಯುವವರೆಗೂ ಪರಸ್ಪರ ಒಬ್ಬರಿಗೊಬ್ಬರು ಮಾತನಾಡದಿರುವುದರಿಂದ ಇಬ್ಬರ ನಡುವೆ ಮನಸ್ತಾಪವಿದೆಯಾ ಎಂಬ ಅನುಮಾನ ಜನರಲ್ಲಿ ಮೂಡಿಸುವಂತಿತ್ತು.