ತುಂಬಿ ಹರಿಯುತ್ತಿದ್ದ ನದಿಯಲ್ಲೇ ಬೈಕ್ ಸವಾರ ದುಸ್ಸಾಹಸ: ವಿಡಿಯೊ ವೈರಲ್ - ವಿಜಯಪುರ ನೆರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8946847-thumbnail-3x2-sss.jpg)
ಮುದ್ದೇಬಿಹಾಳ(ವಿಜಯಪುರ): ಭಾರೀ ಮಳೆಯಿಂದ ತಾಳಿಕೋಟಿ ಪಟ್ಟಣದ ಡೋಣಿ ನದಿ ತುಂಬಿ ಹರಿಯುತ್ತಿದೆ. ಆದರೂ ಇಂತಹ ಪ್ರವಾಹದ ಸಂದರ್ಭದಲ್ಲೇ ನದಿ ತೀರದ ಗ್ರಾಮಸ್ಥರು ತಾಳಿಕೋಟಿ ಪಟ್ಟಣಕ್ಕೆ ನದಿ ದಾಟುವ ದುಸ್ಸಾಹಸ ಮಾಡುತ್ತಿದ್ದಾರೆ. ಏತನ್ಮಧೆ ಶನಿವಾರ ಬೆಳಗ್ಗೆ ನದಿಯಲ್ಲಿ ನೀರಿನ ಸೆಳೆತ ಏರುಗತಿಯಲ್ಲಿ ಸಾಗುತ್ತಿದ್ದರೂ ಅದನ್ನು ಲೆಕ್ಕಿಸದೇ ಬೈಕ್ ಸವಾರನೊಬ್ಬ ನದಿ ದಾಟಲು ಮುಂದಾಗಿ ಡೋಣಿ ನದಿ ಸೇತುವೆ ಮೇಲೆ ಜಾರಿ ಬಿದ್ದಿದ್ದು ಸ್ಥಳೀಯರು ರಕ್ಷಿಸಿದ್ದಾರೆ.