ಬಿಬಿಎಂಪಿ 'ಸಹಾಯ 2.0': ನಮ್ಮ ಬೆಂಗಳೂರು ಯಶಸ್ಸಿಗೆ ಸಿಗಲಿದೆಯೇ ಜನಬಲ?
🎬 Watch Now: Feature Video
ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಿಪರೀತ ಕಸ, ಚರಂಡಿ ಸಮಸ್ಯೆ, ರಸ್ತೆ ಅವ್ಯವಸ್ಥೆ ಸೇರಿ ನಾಗರಿಕರ ಕುಂದು-ಕೊರತೆಗಳನ್ನ ಪಾಲಿಕೆ ಅಧಿಕಾರಿಗಳಿಗೆ ತಲುಪಿಸುವುದು ಹೇಗೆ? ಎಂದು ಜನರಲ್ಲಿದ್ದ ಗೊಂದಲಕ್ಕೆ ಪಾಲಿಕೆ ತೆರೆ ಎಳೆದಿದೆ. ನಾಗರಿಕರ ಕುಂದು-ಕೊರತೆ ನಿವಾರಣೆಗಾಗಿ ಬಿಬಿಎಂಪಿ 'ಸಹಾಯ 2.0' ಎಂಬ ಹೊಸ ಅವತರಣಿಕೆಯ ಆ್ಯಪ್‌ನ ಬಿಡುಗಡೆ ಮಾಡಿದೆ. ಇದರಿಂದಾಗಿ ಪಾಲಿಕೆಗೆ ಸಂಬಂಧಿಸಿದ ವಿವಿಧ ಮಾದರಿಯ ದೂರುಗಳನ್ನ ಸ್ವಯಂಚಾಲಿತವಾಗಿ ಅಧಿಕಾರಿಗಳಿಗೆ ತಲುಪಿಸುವುದು ಸಾಧ್ಯವಾಗಲಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ..