ಶಿವಮೊಗ್ಗ ನಗರದಲ್ಲಿ ಭಾರತ್ ಬಂದ್ಗೆ ಬೆಂಬಲವಿಲ್ಲ - ಶಿವಮೊಗ್ಗ ನಗರದಲ್ಲಿ ಬಂದ್ಗೆ ಬೆಂಬಲವಿಲ್ಲ ಸುದ್ದಿ
🎬 Watch Now: Feature Video
ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಶಿವಮೊಗ್ಗ ನಗರದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಡಿ.3ರಿಂದ ಶಿವಮೊಗ್ಗ ನಗರ ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಹಾಗಾಗಿ ಯಾವುದೇ ರೈತ ಸಂಘಟನೆಗಳು ಇಲ್ಲಿ ಬಂದ್ಗೆ ಕರೆ ನೀಡಿಲ್ಲ. ಇದರ ಪರಿಣಾಮ, ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಭದ್ರಾವತಿಗೆ ಶಿಫ್ಟ್ ಮಾಡಿಕೊಂಡಿವೆ. ಅದರಂತೆ ತೀರ್ಥಹಳ್ಳಿ, ಸಾಗರ, ಸೊರಬ, ಹೊಸನಗರ ಹಾಗೂ ಶಿಕಾರಿಪುರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 11 ಗಂಟೆಯ ನಂತರ ವಿವಿಧ ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೇರಿ, ಮನವಿ ಸಲ್ಲಿಸಲಿದ್ದಾರೆ. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.