ನೆಲಮಂಗಲ: ಬೋನಿಗೆ ಬಿದ್ದ 3.5 ವರ್ಷದ ಹೆಣ್ಣು ಚಿರತೆ - 3.5 ವರ್ಷದ ಹೆಣ್ಣು ಚಿರತೆ ಸೆರೆ ಸುದ್ದಿ
🎬 Watch Now: Feature Video
ನೆಲಮಂಗಲ ಬಳಿಯ ಸಿದ್ದರಬೆಟ್ಟ ಮತ್ತು ರಾಮದೇವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ 3.5 ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ನೆಲಮಂಗಲ ತಾಲೂಕಿನ ಸಿದ್ದರಬೆಟ್ಟ ಮತ್ತು ರಾಮದೇವರ ಬೆಟ್ಟದ ತಪ್ಪಲಿನ ರಾಯರಪಾಳ್ಯದಲ್ಲಿ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಒಂದು ವರ್ಷದಿಂದ ರಾಯರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲಿನ ಚಿರತೆ ಹಾವಳಿ ಹೆಚ್ಚಾಗಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಆರು ತಿಂಗಳ ಹಿಂದೆ ಬೋನು ಇಟ್ಟಿತ್ತು. ರಾತ್ರಿ ಈ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ನೆಲಮಂಗಲ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.