ಅಕ್ಕನ ಮದುವೆ ಬಗ್ಗೆ ಬಾಯ್ಬಿಟ್ಟ ನಟಿ ರಚಿತಾ ರಾಮ್ : ನಿತ್ಯಾ ಮದುವೆಯಾಗ್ತಿರೋದು ಯಾರನ್ನಾ ಗೊತ್ತಾ?
ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಮದುವೆ ಫಿಕ್ಸ್ ಆಗಿದ್ದು, ಡಿಂಪಲ್ ಕ್ವೀನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟಿ ರಚಿತಾ ರಾಮ್, ಸದ್ಯದಲ್ಲೇ ಶೂಟಿಂಗ್ ಇಂದ ಬ್ರೇಕ್ ಪಡೆದು ಮದುವೆ ಕೆಲಸದಲ್ಲಿ ಭಾಗಿಯಾಗುತ್ತೇನೆ ಅಂದ್ರು. ಅಲ್ಲದೆ ನಿತ್ಯಾ ರಾಮ್ ಮದುವೆಯಾಗುತ್ತಿರುವವರು ಯಾರೆಂದು ಕೇಳಿದ್ದಕ್ಕೆ. ಸದ್ಯದಲ್ಲೇ ಫೋಟೋ ಸಮೇತ ತಿಳಿಸುತ್ತೇನೆ. ಆದ್ರೆ ಅಕ್ಕನನ್ನು ಮದುವೆಯಾಗುತ್ತಿರವುದು ಕನ್ನಡದವರು ಎಂದ್ರು.