ಶಿವರಾತ್ರಿ ಹಬ್ಬದ ದಿನದಂದು ಸತ್ಯನಾರಾಯಣ ಪೂಜೆ ಮಾಡಿದ ರಾಗಿಣಿ - Ragini worshiped Satyanarayana on the day of Shivaratri festival
🎬 Watch Now: Feature Video
ಸ್ಯಾಂಡಲ್ವುಡ್ನಲ್ಲಿ ತುಪ್ಪದ ಬೆಡಗಿ ಅಂತಾ ಫೇಮಸ್ ಆಗಿರುವ ರಾಗಿಣಿ ದ್ವಿವೇದಿ ಅವರ ಮನೆಯಲ್ಲಿ ಶಿವನ ಆರಾಧನೆ ಜೋರಾಗಿದೆ. ಕೆಲ ಕಹಿ ಘಟನೆಗಳ ಬಳಿಕ ಸಿನಿಮಾ ಹಾಗೂ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ವೀರಮದಕರಿ ಸುಂದರಿ ರಾಗಿಣಿ, ಈ ಮಹಾಶಿವರಾತ್ರಿ ಹಬ್ಬದ ವಿಶೇಷ ದಿನದಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿದ್ದಾರೆ. ಪಂಜಾಬಿ ಸಂಪ್ರದಾಯದಂತೆ, ಯಲಹಂಕದಲ್ಲಿರುವ ಅಪಾರ್ಟ್ಮೆಂಟ್ನ ಮನೆಯಲ್ಲಿ ಪೂಜೆ ಮಾಡಲಾಗಿದೆ. ಅಪ್ಪ ಅಮ್ಮ ಹಾಗು ಮನೆಯ ಸ್ನೇಹಿತರ ಜೊತೆಗೂಡಿ ರಾಗಿಣಿ ದ್ವಿವೇದಿ ಮನೆಯಲ್ಲಿ ಶಿವನ ಆರಾಧನೆ ಮಾಡಿದ್ದಾರೆ. ಸದ್ಯ ಮನೆಯವರ ಜೊತೆ ಸತ್ಯನಾರಾಯಣ ಪೂಜೆ ಮಾಡಿರುವ ವಿಡಿಯೋವನ್ನು ರಾಗಿಣಿ ದ್ವಿವೇದಿ ತಮ್ಮದೇ ಆರ್.ಡಿ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.