ಮಗನ ಗೆಲುವಿಗೆ ಲಕ್ಕಿ ಅಂಬಾಸಿಡರ್ ಕಾರು ಏರಿ ಬಂದ ಯಡಿಯೂರಪ್ಪ- ವಿಡಿಯೋ - etv bharat kannada
🎬 Watch Now: Feature Video
ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಅಂಬಾಸಿಡರ್ ಸಿಕೆಆರ್ 45 ಕಾರನ್ನು ಇಂದು ಮತ್ತೆ ಏರಿದ್ದಾರೆ. ತಮ್ಮ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಬಳಸಿದ್ದ ಕಾರನ್ನು ಯಡಿಯೂರಪ್ಪ ಲಕ್ಕಿ ಅಂತ ಭಾವಿಸಿದ್ದು ಅದನ್ನು ಈಗಲು ಸಹ ಶಿಕಾರಿಪುರದ ತೋಟದ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇಂದು ಎರಡನೇ ಪುತ್ರ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ತಮ್ಮ ತೋಟದ ಮನೆಯಿಂದ ಇದೇ ಲಕ್ಕಿ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು.
ಈ ವೇಳೆ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಯಲ್ಲಿಯೇ ಕೂರಿಸಿಕೊಂಡು ಶಿಕಾರಿಪುರ ಪಟ್ಟಣದ ಮಾಳೇರಕೇರಿಗೆ ಆಗಮಿಸಿದರು. ಬಿ.ವೈ.ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪನವರ ರಾಜಕೀಯ ಶುರುವಾಗಿದ್ದೇ CKR 45 ಅಂಬಾಸಿಡರ್ ಕಾರ್ನಲ್ಲಿ. ಅವರು ಆ ಕಾರಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಆ ಕಾರು ನೋಡಿದರೆ ನಮ್ಮ ಕಾರ್ಯಕರ್ತರಿಗೆ ರೋಮಾಂಚನವಾಗುತ್ತದೆ. ಬಿಜೆಪಿಯ ಗುರುತು ಕಮಲವಾದರೆ, ಯಡಿಯೂರಪ್ಪನವರ ಗುರುತು ಅಂಬಾಸಿಡರ್ ಕಾರು ಎಂದರೆ ತಪ್ಪಾಗುವುದಿಲ್ಲ. ಆ ರೀತಿಯಾದ ಅವಿನಾಭಾವ ಸಂಬಂಧ ಯಡಿಯೂರಪ್ಪ ಮತ್ತು ಅಂಬಾಸಿಡರ್ ಕಾರಿನ ನಡುವೆ ಇದೆ ಎಂದು ಹೇಳಿದರು. ಬಿ.ವೈ.ವಿಜಯೇಂದ್ರ ಇದೇ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ: ಕೃತಕ ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿದ ಬಿಎಸ್‌ಪಿ ಅಭ್ಯರ್ಥಿ- ವಿಡಿಯೋ