ಎಸ್ಐಎಫ್ಎಫ್ ಸದಸ್ಯರಿಂದ ಎಲಾನ್ ಮಸ್ಕ್ ಫೋಟೋಗೆ ಪೂಜೆ.. ಏಕೆ ಗೊತ್ತಾ? - Woke Ashura
🎬 Watch Now: Feature Video
ಬೆಂಗಳೂರು: ಪುರುಷರ ಹಕ್ಕುಗಳ ಉಳಿವಿಗಾಗಿ ಅಭಿಯಾನ ನಡೆಸುತ್ತಿರುವ ಸೇವ್ ಇಂಡಿಯನ್ ಫ್ಯಾಮಿಲಿ ಫೆಡರೇಶನ್ (SIFF)ನ ಸದಸ್ಯರು ಟ್ವಿಟರ್ ಹಾಗೂ ಟೆಸ್ಲಾ ಕಂಪನಿಯ ಮಾಲೀಕ ಬಿಲಿಯನೇರ್ ಎಲಾನ್ ಮಸ್ಕ್ ಅವರ ಫೋಟೋಗೆ ಪೂಜೆ ಮಾಡಿರುವ ಘಟನೆ ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ನಡೆದಿದೆ.
ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್ ಸಂಸ್ಥೆಯನ್ನು ಖರೀದಿಸುವ ಮೂಲಕ ಎಲಾನ್ ಮಸ್ಕ್ ಅವರು ಪುರುಷರು ತಮ್ಮ ಮೇಲೆ ಆಗುತ್ತಿರುವ ದಬ್ಬಾಳಿಕೆಯ ಕುರಿತು ದನಿ ಎತ್ತಲು ವೇದಿಕೆ ಕಲ್ಪಿಸಿದ್ದಾರೆ. ಎಲಾನ್ ಮಸ್ಕ್ ಅವರನ್ನೂ 'ವೋಕ್ ಅಶುರ'( ವೋಕಾಶುರ) (Woke Ashura) 'ಸ್ತ್ರೀವಾದವನ್ನೂ ಹೊರಹಾಕುವವನು' ಎಂದು ಸಾಂಕೇತಿಕ ಪೂಜೆ ಆಯೋಜಿಸಲಾಗಿದೆ ಎಂದು SIFF ಸದಸ್ಯರು ತಿಳಿಸಿದ್ದಾರೆ.
ವೈವಾಹಿಕ ಅತ್ಯಾಚಾರದಂಥ ಪ್ರಕರಣಗಳ ಕುರಿತು ನ್ಯಾಯಾಲಯದ ಮುಂದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿರೋಧಿಸಿ SIFF ಸದಸ್ಯರು ಕಳೆದ ಕೆಲ ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಇದನ್ನೂಓದಿ:ಭಾರತ ಪ್ರವಾಸದಲ್ಲಿ ಬಿಲ್ ಗೇಟ್ಸ್: ಆರ್ಬಿಐ ಕಚೇರಿಗೆ ಭೇಟಿ, ಮಹತ್ವದ ಮಾತುಕತೆ