ಕಾಂಗ್ರೆಸ್ ಶಾಸಕ ಎಸ್ ರಾಮಪ್ಪಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿದ ಮಹಿಳೆಯರು.. ರಸ್ತೆ ಸರಿಪಡಿಸಿ, ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ.. - ಶಾಸಕ ಎಸ್ ರಾಮಪ್ಪ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17525102-thumbnail-3x2-sanju.jpg)
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕರಿಗೆ ಮಹಿಳೆಯರು ಹಾಗೂ ಗ್ರಾಮಸ್ಥರು ಘೇರಾವ್ ಹಾಕಿ ಧಿಕ್ಕಾರ ಕೂಗಿರುವ ಘಟನೆ ನಡೆದಿದೆ. ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶಾಸಕ ಎಸ್ ರಾಮಪ್ಪಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕೂಡ ಜರುಗಿದೆ. ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 10 ವರ್ಷಗಳಿಂದ ದುಃಸ್ಥಿತಿಯಲ್ಲಿದ್ದು, ಕೆಸರು ಗದ್ದೆಯಂತಾಗಿದೆ.
ಹೀಗಾಗಿ ರಸ್ತೆ ಸರಿಪಡಿಸಿ ಬಸ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು. ಘೇರಾವ್ ಹಾಕಿದ ಮಹಿಳೆಯರು ಶಾಸಕ ಎಸ್ ರಾಮಪ್ಪ ಅವರನ್ನು ತಮ್ಮ ವಾಹನದಿಂದ ಕೆಳಗಿಳಿಸಿ ನಡೆಸಿಕೊಂಡು ಬರುವ ಮೂಲಕ ನಮ್ಮ ಗ್ರಾಮಕ್ಕೆ ಮೂರು ಬಾರಿ ಬಸ್ ಬರಬೇಕು, ರಸ್ತೆ ಸರಿಯಾಗಬೇಕು ಎಂದು ಆಗ್ರಹಿಸಿದ್ರು. ಇದಕ್ಕೆ ಗ್ರಾಮಸ್ಥರು ಕೂಡ ಸಾತ್ ನೀಡಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು.
ಇದನ್ನು ಓದಿ: ಮುಂದಿನ 15 ದಿನದೊಳಗೆ 15 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್