ಸಾಲ ವಸೂಲಾತಿ ವಿಚಾರ: ಬ್ಯಾಂಕ್ ಸಿಬ್ಬಂದಿಯ ಬೈಕ್ ಅಂತ ತಿಳಿದು ಗ್ರಾಮದ ವ್ಯಕ್ತಿ ಬೈಕ್ಗೆ ಬೆಂಕಿ ಹಚ್ಚಿದ ಮಹಿಳೆಯರು! - ಸಾಲ ವಸೂಲಾತಿ ವಿಚಾರ
🎬 Watch Now: Feature Video
ಕೋಲಾರ: ಡಿಸಿಸಿ ಬ್ಯಾಂಕ್ನ ಸಾಲ ವಸೂಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ವಾಗ್ವಾದ ನಡೆದಿದೆ. ಸಾಲ ವಸೂಲಾತಿಗೆ ಬಂದಿದ್ದ ಸಿಬ್ಬಂದಿಯ ಬೈಕ್ ಎಂದು ತಿಳಿದು ಗ್ರಾಮಸ್ಥರೊಬ್ಬರ ಬೈಕ್ಗೆ ಮಹಿಳೆಯರೆಲ್ಲ ಸೇರಿಕೊಂಡು ಬೆಂಕಿ ಹಚ್ಚಿ ಎಡವಟ್ಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಿಸ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಬ್ಯಾಂಕ್ ಸಿಬ್ಬಂದಿಯ ಬೈಕ್ ಅಲ್ಲವೆಂದು ಗೊತ್ತಾದ ಬಳಿಕ ಮಹಿಳೆಯರೇ ಬೆಂಕಿ ಆರಿಸಿದ್ದಾರೆ.
ಮುಳಬಾಗಿಲು ತಾಲೂಕಿನ ಗೋಕುಂಟೆ ಸೊಸೈಟಿಯಿಂದ ಬಿಸ್ನಹಳ್ಳಿ ಗ್ರಾಮದ ಮಹಿಳೆಯರು ಸಾಲ ಪಡೆದಿದ್ದು, ಕಳೆದ ಎರಡು ತಿಂಗಳಿನಿಂದ ಸಾಲ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಜೋಸೆಫ್ ಎಂಬುವರು ದಾಖಲೆಗಳ ಸಮೇತ ಸಾಲ ವಸೂಲಾತಿಗೆ ತೆರಳಿದ್ದರು. ಈ ವೇಳೆ ಅವರ ಜೊತೆ ವಾಗ್ದಾದ ನಡೆಸಿದ ಗ್ರಾಮದ ಮಹಿಳೆಯರು, ಆಕ್ರೋಶದಲ್ಲಿ ಬೈಕ್ಗೆ ಬೆಂಕಿ ಹಚ್ಚಿದ್ದರು. ಬಳಿಕ ಈ ಬೈಕ್ ಅವರದ್ದಲ್ಲ, ಗ್ರಾಮಸ್ಥರ ಬೈಕ್ ಎಂದು ತಿಳಿದ ಕೂಡಲೇ ಮಹಿಳೆಯರೇ ಬೆಂಕಿ ಆರಿಸಿದ್ದಾರೆ. ಸಾಲ ಮನ್ನಾ ವಿಚಾರವಾಗಿ ಕೋಲಾರದಲ್ಲಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಪ್ರತಿಭಟನೆ ದಿನೇ ದಿನೇ ತೀವ್ರ ರೂಪ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ: 'ಮನ್ ಕಿ ಬಾತ್' 100 ಆಯಿತು; ಈಗಲಾದರೂ ‘ಜನ್ ಕಿ ಬಾತ್' ಕೇಳುತ್ತಿರಾ? : ಸಿದ್ದರಾಮಯ್ಯ