ಕೇರಳದ ಉಳಿಕ್ಕಲ್ ಪೇಟೆಯಲ್ಲಿ ಭೀತಿ ಸೃಷ್ಟಿಸಿದ ಕಾಡಾನೆ - ವಿಡಿಯೋ - ಅಧಿಕಾರಿಗಳ ಮಾಹಿತಿ

🎬 Watch Now: Feature Video

thumbnail

By ETV Bharat Karnataka Team

Published : Oct 12, 2023, 2:05 PM IST

ಕಣ್ಣೂರು (ಕೇರಳ): ಕಣ್ಣೂರಿನ ಉಳಿಕ್ಕಲ್ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯನ್ನು ಮರಳಿ ಕಾಡಿಗೆ ಕಳುಹಿಸಲಾಗಿದೆ. ಆನೆ ಸಾಗಿದ ದಾರಿಯಲ್ಲಿ ಇಂದು (ಗುರುವಾರ) ಬೆಳಿಗ್ಗೆ 9 ಗಂಟೆ ಸುಮಾರಿಗೆ ಉಳಿಕಲ್ ಪಟ್ಟಣದ ಬಳಿ ಶವ ಪತ್ತೆಯಾಗಿದೆ. ಮೃತರನ್ನು ನೆಲ್ಲಿಕ್ಕಂಪೋಯಿಲ್ ಮೂಲದ ಜೋಸ್ (71) ಎಂದು ಗುರುತಿಸಲಾಗಿದೆ. ಜೋಸ್ ಅವರ ದೇಹದಲ್ಲಿ ಆನೆ ದಾಳಿಯಿಂದ ಆಗಿರುವ ಗಾಯದ ಗುರುತುಗಳಿವೆ. ಜೋಸ್ ಭಯಗೊಂಡು ಓಡುತ್ತಿರುವ ವೇಳೆಯಲ್ಲಿ ಆನೆ ದಾಳಿ ಮಾಡಿರಬಹುದು ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಜೋಸ್ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಉಳಿಕ್ಕಲ್ ಪೇಟೆಗೆ ಆನೆ ನುಗ್ಗಿತ್ತು. ಇದರಿಂದ ಜನರಲ್ಲಿ ತೀವ್ರ ಆತಂಕ ಮೂಡಿತ್ತು. ಈ ವೇಳೆ, ಮೂವರು ಗಾಯಗೊಂಡಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಆನೆಯನ್ನು ಕಾಡಿಗೆ ಓಡಿಸಲು ಯತ್ನಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಹಲವು ಬಾರಿ ಪಟಾಕಿ ಸಿಡಿಸಿದ್ದಾರೆ. ಆದರೆ, ಮಧ್ಯಾಹ್ನ ಆರಂಭವಾದ ಭಾರೀ ಮಳೆ ಹಿನ್ನೆಲೆ, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಮಳೆ ನಿಂತ ನಂತರ, ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಅಂತಿಮವಾಗಿ ಪಟಾಕಿ ಸದ್ದಿನಿಂದಾಗಿ  ಆನೆಯು ಕರ್ನಾಟಕದ ಅರಣ್ಯ ಪ್ರದೇಶದತ್ತ ಓಡಿ ಹೋಯಿತು.

ಇದನ್ನೂ ಓದಿ: ಚೇಳು ಕಚ್ಚಿ ಐದು ವರ್ಷದ ಬಾಲಕ ಸಾವು... ಮೂಢನಂಬಿಕೆಯೇ ಮಗುವಿನ ಜೀವಕ್ಕೆ ಎರವಾಯ್ತಾ?

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.