Watch video: ಐಸಿಸಿ ವಿಶ್ವಕಪ್ 2023 ಪ್ರೋಮೋದಲ್ಲಿ ಕೊಹ್ಲಿ ಟ್ಯಾಟೂ; ವಿರಾಟ್ ಮೇಲಿನ ಯುವಕನ ಅಭಿಮಾನ ಎಂಥಾದ್ದು ಗೊತ್ತಾ? - ವಿರಾಟ್ ಕೊಹ್ಲಿ ಅಭಿಮಾನಿ ಪಿಂಟು ಬೆಹೆರಾ
🎬 Watch Now: Feature Video
ಬ್ರಹ್ಮಪುರ (ಒಡಿಶಾ) : ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಪುರುಷರ್ ವಿಶ್ವಕಪ್ 2023ರ ಅಧಿಕೃತ ಪ್ರೋಮೋದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬ ಕಾಣಿಸಿಕೊಂಡಿರುವುದು ಭಾರಿ ಗಮನ ಸೆಳೆದಿದೆ. ಏಕೆಂದರೆ ಕೊಹ್ಲಿ ಮೇಲಿನ ಅಪಾರ ಪ್ರೀತಿ ಅಭಿಮಾನಕ್ಕಾಗಿ ಬ್ರಹ್ಮಪುರದ ಪಿಂಟು ಬೆಹೆರಾ ಎಂಬ ಯುವಕ ತನ್ನ ಕೈ, ಹೊಟ್ಟೆ, ಬೆನ್ನು, ಕಾಲುಗಳು ಮತ್ತು ದೇಹದ ಇತರ ಭಾಗಗಳ ಮೇಲೆ ಕೊಹ್ಲಿಯ ಹಲವಾರು ಟ್ಯಾಟೂಗಳನ್ನು ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಆತನ ಅಭಿಮಾನಕ್ಕೆ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕ್ರಿಕೆಟಿಗರು ಭಾರಿ ಮೆಚ್ಚುಗೆ ಸಲ್ಲಿಸಿದ್ದು, ಆತ ಕೂಡ ಫುಲ್ ಖುಷ್ ಆಗಿದ್ದಾನೆ.
ಪಿಂಟು ಬೆಹೆರಾ ಅವರು ಮಾತನಾಡಿದ್ದು, “ನನಗೆ ವಿರಾಟ್ ಸರ್ ಅವರನ್ನು ಭೇಟಿಯಾಗಬೇಕು ಎಂಬ ಕನಸಿತ್ತು. ಅವರನ್ನು ಭೇಟಿಯಾದ ನಂತರ ನನಗೆ ಹಲವು ಹೊಸ ಆಫರ್‌ಗಳು ಬರುತ್ತಿವೆ. ಐಸಿಸಿ ಬಿಡುಗಡೆ ಮಾಡಿರುವ ಏಕದಿನ ವಿಶ್ವಕಪ್ ಪ್ರೋಮೋದಲ್ಲಿ ಸೇರ್ಪಡೆಗೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ವಿರಾಟ್ ಅಭಿಮಾನಿಯಾದ ನಂತರ ನನಗೆ ತುಂಬಾ ಗೌರವ ಸಿಗುತ್ತಿದೆ. ನಾನು ಕೊಹ್ಲಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ ವಿಶ್ವಕಪ್ ಪ್ರೋಮೋ ಚಿತ್ರೀಕರಣದ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೆಪಿ ಡುಮಿನಿ ಮತ್ತು ಭಾರತದ ಸ್ಪಿನ್ನರ್ ಮುರಳಿ ಕಾರ್ತಿಕ್ ಅವರನ್ನು ಭೇಟಿಯಾಗಿದ್ದಾಗಿ ಪಿಂಟು ಬಹಿರಂಗಪಡಿಸಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಭಾರತ ತಂಡದ ವಿಕೆಟ್‌ಕೀಪರ್ ಅಂಡ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರನ್ನು ಹೋಲುವ ಕಾರಣ ಎಲ್ಲಾ ಕ್ರಿಕೆಟಿಗರು ಅವರನ್ನು ಡಿಕೆ ಎಂದು ಕರೆಯುತ್ತಿದ್ದರಂತೆ.
ಇದನ್ನೂ ಓದಿ : ವಿಶ್ವಕಪ್ನ 'ನವರಸ' ಪ್ರೋಮೋ ರಿಲೀಸ್.. ಐಸಿಸಿ ಟ್ರೋಫಿಯೊಂದಿಗೆ ಶಾರುಖ್ ಖಾನ್ ಮಿಂಚು.. ಫ್ಯಾನ್ಸ್ ಪ್ರತಿಕ್ರಿಯೆ ಹೀಗಿದೆ...