ಮನೆಗೆ ಬಾರದ ಗಂಗೆ.. ಹಳ್ಳದ ನೀರನ್ನೇ ಕುಡಿಯುತ್ತಿರುವ ಗ್ರಾಮಸ್ಥರು - ಮನೆಮನೆಗೆ ಕುಡಿಯುವ ನೀರಿನ ವ್ಯವಸ್ಥೆ
🎬 Watch Now: Feature Video
ಚಾಮರಾಜನಗರ : ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ಲೈನ್ ವಿದ್ಯುತ್ ಕೇಬಲ್ ತುಂಡಾಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಆನೆಹೊಲ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಜನ ಹಳ್ಳದ ನೀರನ್ನೇ ಬಸಿದು ಕುಡಿಯುತ್ತಿರುವ ಪರಿಸ್ಥಿತಿ ಎದುರಾಗಿದೆ.
ಆನೆಹೊಲ ಗ್ರಾಮದಲ್ಲಿ 200 ಮನೆಗಳಿದ್ದು, 400ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಳೆದ 8 ದಿನಗಳಿಂದಲೂ ಕುಡಿಯುವ ನೀರು ಸರಬರಾಜು ಆಗದ ಹಿನ್ನೆಲೆ ಹಳ್ಳದ ನೀರನ್ನು ಬಸಿದು ಮಹಿಳೆಯರು ಮನೆಗೆ ಹೊತ್ತು ತರುವ ಪರಿಸ್ಥಿತಿ ಉದ್ಭವಿಸಿದೆ.
ಗ್ರಾಮದ ಸಮೀಪ ಹರಿಯುತ್ತಿರುವ ಕರಡಿ ಶೀಳು ಹಳ್ಳ ಎಂಬಲ್ಲಿಂದ ಮಹಿಳೆಯರು ಬಟ್ಟೆ ಮೂಲಕ ನೀರನ್ನು ಬಸಿದು ತರುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ ಎಂದು ಜನರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.
ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಗ್ರಾಪಂನ ಪಿಡಿಒ ಕಿರಣ್ ಕುಮಾರ್ ಪ್ರತಿಕ್ರಿಯಿಸಿದ್ದು, ಜಲಜೀವನ್ ಮಿಷನ್ ಮನೆಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ವಿವಿಧ ಗ್ರಾಮಗಳಲ್ಲಿ ಕಾಮಗಾರಿ 80ರಷ್ಟು ಮುಗಿದಿದೆ. ಪೈಪ್ಲೈನ್ ಅಳವಡಿಸುವಾಗ ಈ ಹಿಂದೆ ಗ್ರಾಮಕ್ಕೆ ನೀರು ಸರಬರಾಜಾಗುತ್ತಿದ್ದ ಪೈಪ್ ಲೈನ್ ಹಾಳಾಗಿದ್ದು, ತುರ್ತಾಗಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ಹಾಹಾಕಾರ