ವಾಹನ ಪಲ್ಟಿಯಾಗಿ 800 ಕೋಳಿಗಳು ಸಾವು... ಸಿಕ್ಕ ಸಿಕ್ಕ ಕೋಳಿ ತೆಗೆದುಕೊಂಡು ಹೋದ ಜನ!

By

Published : Oct 14, 2022, 5:06 PM IST

Updated : Feb 3, 2023, 8:29 PM IST

thumbnail
ಮೇದಕ್: ಕೋಳಿಗಳನ್ನು ಸಾಗಿಸುತ್ತಿದ್ದ ವ್ಯಾನ್​ವೊಂದಯ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ರಾಮಯಂಪೇಟ ಮಂಡಲದ ಲಕ್ಷ್ಮಾಪುರದಲ್ಲಿ ನಡೆದಿದೆ. ಲಕ್ಷ್ಮಾಪುರದಿಂದ ಸಿದ್ದಿಪೇಟೆಗೆ 1200 ಕೋಳಿಗಳನ್ನು ಸಾಗಿಸುತ್ತಿದ್ದ ಈ ವಾಹನ ಇಲ್ಲಿಯ ಉಪ ಠಾಣೆಯ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಿಂದ ಕೋಳಿಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಷಯ ತಿಳಿದ ಸುತ್ತಮುತ್ತಲಿನ ಜನರು ಸಿಕ್ಕ ಸಿಕ್ಕ ಕೋಳಿಗಳನ್ನು ಹಿಡಿಕೊಂಡು ಮನೆಗೆ ಹೋದರು. ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವ್ಯಾನ್​ ಚಾಲಕ, ಸುಮಾರು 800 ಕೋಳಿಗಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.