51 ಗಂಟೆಯಲ್ಲಿ ಎರಡೂ ರೈಲು ಹಳಿಗಳ ದುರಸ್ತಿ.. ಕೈ ಮುಗಿದ ರೈಲ್ವೆ ಸಚಿವ.. ವಿಡಿಯೋ!

By

Published : Jun 5, 2023, 7:54 AM IST

thumbnail

ಬಾಲಸೋರ್​ (ಒಡಿಶಾ): ಒಡಿಶಾದ ಬಾಲಸೋರ್​ ಜಿಲ್ಲೆಯ ಬಹನಾಗಾ ಬಜಾರ್​ ನಿಲ್ದಾಣದ ಬಳಿ ನಡೆದ ಭೀಕರ ರೈಲು ಅಪಘಾತ ಸ್ಥಳದಲ್ಲಿ ಎರಡೂ ರೈಲು ಹಳಿಗಳನ್ನು ದುರಸ್ತಿಪಡಿಸಲಾಗಿದೆ. ಘಟನೆ ಸಂಭವಿಸಿದ 2 ದಿನಗಳ ಬಳಿಕ ಪೂರ್ವ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮುಖ್ಯ ಟ್ರಂಕ್​ ಲೈನ್​ನಲ್ಲಿ ಬಿದ್ದಿದ್ದ ಕೋಚ್​ಗಳನ್ನು ಕ್ರೇನ್​ ಮತ್ತು ಬುಲ್ಡೋಜರ್​ ಸಹಾಯದಿಂದ ಮೇಲೆತ್ತಿ ರೈಲು ಹಳಿಗಳನ್ನು ರೈಲು ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​, "ಅಪ್​- ಲೈನ್​ ಲಿಂಕ್​ ಮಾಡುವ ಟ್ರ್ಯಾಕ್​ ಅನ್ನು ಪುನಃಸ್ಥಾಪಿಸಲಾಗಿದೆ ಮತ್ತು ಓವರ್​ಹೆಡ್​ ವಿದ್ಯುದ್ದೀಕರಣ ಕಾರ್ಯವೂ ಪ್ರಾರಂಭವಾಗಿದೆ. ಎರಡು ರೈಲ್ವೇ ಹಳಿಗಳನ್ನು ದುರಸ್ತಿ ಮಾಡಲಾಗಿದೆ. ನಾವು ಈಗ ಮೇಲ್ಮುಖ ವಿದ್ಯುತ್ ಕೇಬಲ್‌ಗಳನ್ನು ಮರುಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಇದೇ ವೇಳೆ ಹಳಿಗಳ ದುರಸ್ತಿ ಮುಗಿದ ತಕ್ಷಣ ಹಳಿ ಮೇಲೆ ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಯಿತು. ಹಳಿ ರಿಪೇರಿ ಬಳಿಕ ಗೂಡ್ಸ್​ ರೈಲು ಸಂಚಾರ ಆರಂಭಿಸಿತು. ಈ ವೇಳೆ ಅಲ್ಲೇ ಇದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​​​​​​ ಕೈಮುಗಿದು, ಬೀಳ್ಕೊಟ್ಟರು.

ಸಿಬಿಐ ತನಿಖೆಗೆ ಶಿಫಾರಸು: ತ್ರಿವಳಿ ರೈಲು ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು. ಹಳಿಗಳ ಮರುಸ್ಥಾಪನೆಯು ಕನಿಷ್ಠ ಒಂದು ಸೆಟ್ ರೈಲ್ವೇ ಹಳಿಗಳು ಈಗ ರೈಲುಗಳಿಗೆ ಸರಿಹೊಂದುತ್ತದೆ ಎಂದು ಸೂಚಿಸುತ್ತದೆ, ಆದರೆ ಬಾಲಸೋರ್ ಅಪಘಾತದ ಸ್ಥಳದಲ್ಲಿ ಲೂಪ್ ಲೈನ್‌ಗಳನ್ನು ಒಳಗೊಂಡಿರುವ ಎಲ್ಲಾ ಟ್ರ್ಯಾಕ್‌ಗಳನ್ನು ಸರಿಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಓವರ್ ಹೆಡ್ ಎಲೆಕ್ಟ್ರಿಕ್ ಕೇಬಲ್ ರಿಪೇರಿಯಾಗುವವರೆಗೂ ದುರಸ್ತಿಗೊಂಡಿರುವ ಎರಡು ಲೈನ್​ಗಳಲ್ಲಿ ಡೀಸೆಲ್ ಇಂಜಿನ್​ಗಳನ್ನು ಮಾತ್ರ ಓಡಿಸಬಹುದಾಗಿದೆ. ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗಳನ್ನು ಸರಿಪಡಿಸಿದ ನಂತರ ಎಲೆಕ್ಟ್ರಿಕ್ ರೈಲುಗಳು ಸಂಚಾರವನ್ನು ಪ್ರಾರಂಭಿಸಬಹುದು. ಇದು ಇನ್ನೂ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ.. ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಗೌತಮ್ ಅದಾನಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.