ಮೈತ್ರಿ ಬಾಗ್ ಮೃಗಾಲಯದಲ್ಲಿ 2 ತಿಂಗಳ ಬಿಳಿ ಹುಲಿ 'ಸಿಂಗಮ್' ಸಂಭ್ರಮ- ವಿಡಿಯೋ - 2 ತಿಂಗಳ ಬಿಳಿ ಹುಲಿ ಸಿಂಗಮ್ ಸಂಭ್ರಮ
🎬 Watch Now: Feature Video
ಭಿಲಾಯ್ (ಛತ್ತೀಸ್‌ಗಢ): ಎರಡು ತಿಂಗಳ ಮುದ್ದಾದ ಬಿಳಿ ಹುಲಿ ‘ಸಿಂಗಮ್’ ಅನ್ನು ಛತ್ತೀಸ್‌ಗಢದ ಭಿಲಾಯ್ ಜಿಲ್ಲೆಯ ಮೈತ್ರಿ ಬಾಗ್ ಮೃಗಾಲಯದಲ್ಲಿ ಮಂಗಳವಾರ ಬಿಡಲಾಯಿತು. ರೋಮಾ ಹೆಸರಿನ ಹೆಣ್ಣು ಹುಲಿ ಮತ್ತು ಸುಲ್ತಾನ್ ಹೆಸರಿನ ಗಂಡು ಹುಲಿಗೆ ಜನಿಸಿದ ಈ ಮರಿಹುಲಿಯೇ ‘ಸಿಂಗಮ್. ಸೆಪ್ಟೆಂಬರ್ 5 ರಂದು ಮರಿ ಜನಿಸಿದ್ದು, ಆರೋಗ್ಯವಾಗಿದೆ ಎಂದು ಮೈತ್ರಿ ಬಾಗ್ ಮೃಗಾಲಯದ ಉಸ್ತುವಾರಿ ಎನ್ ಕೆ ಜೈನ್ ಮಾಹಿತಿ ನೀಡಿದ್ದಾರೆ. ಜೊತೆಗೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹುಲಿಗಳ ಸಂತಾನೋತ್ಪತ್ತಿಯನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಗಿದೆ ಎಂದಿದ್ದಾರೆ. ಸುಮಾರು ಆರು ವರ್ಷಗಳಿಂದ ಉದ್ಯಾನವನದಲ್ಲಿ ವಾಸಿಸುತ್ತಿರುವ ಶಿಲಾ ಎಂಬ ಹುಲಿ ಈ ವರ್ಷದ ಮಾರ್ಚ್ 22 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ನಾಲ್ಕು ಹುಲಿ ಮರಿಗಳನ್ನು ಸಿಲಿಗುರಿಯ ಬಳಿ ಬೆಂಗಾಲ್ ಸಫಾರಿಯ ತೆರೆದ ಆವರಣದಲ್ಲಿ ಬಿಡಲಾಗಿತ್ತು.
Last Updated : Feb 3, 2023, 8:31 PM IST