ಟಿಡಿಪಿ ಗೆದ್ದಿರುವ ಸ್ಥಳಗಳಲ್ಲಿ ಸಮಸ್ಯೆಗಳ ಸುರಿಮಳೆ.. ಚಪ್ಪಲಿಯಿಂದ ಹೊಡೆದುಕೊಂಡು ಅಳಲು ತೋಡಿಕೊಂಡ ಕೌನ್ಸಿಲರ್ - ಟಿಡಿಪಿ ಅಭ್ಯರ್ಥಿಗಳು ಗೆದ್ದಿರುವ ಸ್ಥಳ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/01-08-2023/640-480-19153665-1107-19153665-1690889660284.jpg)
ಅನಕಾಪಲ್ಲಿ(ಆಂಧ್ರಪ್ರದೇಶ): ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಕಡೆಗಣಿಸಿ ಪ್ರತಿಪಕ್ಷಗಳ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ. ಚುನಾವಣೆ ನಂತರ ಅಧಿಕಾರಕ್ಕೆ ಬಂದ ಮೇಲೂ ರಾಜಕೀಯ ಮಾಡುತ್ತಿದ್ದಾರೆ. ಒಂದೆಡೆ ಗ್ರಾಮಗಳಲ್ಲಿ ಸರಪಂಚರಿಗೆ, ಮತ್ತೊಂದೆಡೆ ಪಟ್ಟಣಗಳಲ್ಲಿ ವಾರ್ಡ್ ಕೌನ್ಸಿಲರ್‌ಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಟಿಡಿಪಿ ಅಭ್ಯರ್ಥಿಗಳು ಗೆದ್ದಿರುವ ಸ್ಥಳಗಳಲ್ಲಿ ಸಮಸ್ಯೆಗಳು ವರ್ಷಗಳಿಂದ ಬಗೆಹರಿದಿಲ್ಲ. ಇದರಿಂದ ಬೇಸತ್ತಿರುವ ವಿರೋಧ ಪಕ್ಷಗಳ ಅಭ್ಯರ್ಥಿಗಳು ಜನರ ಭರವಸೆ ಗಳಿಸಲು ಸಾಧ್ಯವಾಗದೆ, ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ನಲುಗಿ ಹೋಗುತ್ತಿದ್ದಾರೆ. ಈ ಹಿನ್ನೆಲೆ ನರಸೀಪಟ್ಟಣಂ ಟಿಡಿಪಿ ಕೌನ್ಸಿಲರ್ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ತಮಗೆ ತಾವೇ ಶಿಕ್ಷೆ ಅನುಭವಿಸಿದ್ದಾರೆ. ಸಭೆಯ ವೇಳೆ ತಮ್ಮ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದುಕೊಂಡು ಅಳಲು ತೋಡಿಕೊಂಡಿದ್ದಾರೆ. ಆಸ್ತಿ ಗಳಿಸಲು ಬಂದಿಲ್ಲ. ಸಾರ್ವಜನಿಕ ಸೇವೆ ಮಾಡಲು ಬಂದಿದ್ದೇವೆ ಎಂದು ಹಲವು ಪುರಸಭಾ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡರು.
ಅನಕಾಪಲ್ಲಿ ಜಿಲ್ಲೆ ನರಸೀಪಟ್ಟಣ ನಗರಸಭೆಯಲ್ಲಿ ಸಾಮಾನ್ಯ ಸಭೆ ಕೈಗೊಳ್ಳಲಾಗಿತ್ತು. 30 ತಿಂಗಳು ಕಳೆದರೂ ಸ್ವಂತ ವಾರ್ಡ್‌ನಲ್ಲಿ ಕುಡಿಯುವ ನೀರಿನ ನಲ್ಲಿ ಕೂಡ ಹಾಕದ ದುಸ್ಥಿತಿ ನನಗೆ ಎದುರಾಗಿದೆ ಎಂದು ತೆಲುಗು ದೇಶಂ ಪಕ್ಷದ ಕೌನ್ಸಿಲರ್ ರಾಮರಾಜು ಅಳಲು ತೋಡಿಕೊಂಡರು. ಇದರ ಭಾಗವಾಗಿ ಸಭೆಯಲ್ಲಿಯೇ ತನ್ನ ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟನೆ ನಡೆಸಿದರು. ನರಸೀಪಟ್ಟಣ ಪುರಸಭೆ ಸಭೆ ಅಧ್ಯಕ್ಷೆ ಸುಬ್ಬಲಕ್ಷ್ಮಿ ಅಧ್ಯಕ್ಷತೆಯಲ್ಲಿ ಈ ಘಟನೆ ನಡೆಯಿತು.
ಓದಿ: ಆ.3ರಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿ; ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಸಾಧ್ಯತೆ