ಬಿಗಿ ಭದ್ರತೆ ನಡುವೆ ರಾಮಜನ್ಮಭೂಮಿ ಸಂಕೀರ್ಣಕ್ಕೆ ರಾಮಲಲ್ಲಾ ಪ್ರತಿಮೆ ರವಾನೆ - ರಾಮಲಲ್ಲಾ ಪ್ರತಿಮೆ

🎬 Watch Now: Feature Video

thumbnail

By ETV Bharat Karnataka Team

Published : Jan 17, 2024, 10:36 PM IST

ಅಯೋಧ್ಯೆ (ಉತ್ತರ ಪ್ರದೇಶ) : ಇಡೀ ದಿನ ಕಾದು, ಎಲ್ಲರೂ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಬುಧವಾರ ಸಂಜೆ 7.30ರ ಸುಮಾರಿಗೆ ನೂತನವಾಗಿ ನಿರ್ಮಿಸಲಾದ ಶ್ರೀರಾಮನ ಮೂರ್ತಿಯು ವಿವೇಕ ಸೃಷ್ಟಿ ಆಶ್ರಮದಿಂದ ರಾಮಜನ್ಮಭೂಮಿ ಸಂಕೀರ್ಣದ ಕಡೆಗೆ ಹೊರಟಿತು. ರಾಮಲಲ್ಲಾ ಅವರ ವಿಗ್ರಹವನ್ನು ನಿರ್ಮಾಣ ಸ್ಥಳದಿಂದ ಜನ್ಮಭೂಮಿ ಸಂಕೀರ್ಣಕ್ಕೆ ತರಲಾಗಿದೆ ಎಂಬ ಸುದ್ದಿ ತಿಳಿದ ಮಾಧ್ಯಮದವರ ದೊಡ್ಡ ಗುಂಪು ಬೆಳಗ್ಗೆಯಿಂದಲೇ ವಿವೇಕ್ ಸೃಷ್ಟಿ ಆಶ್ರಮದ ಹೊರಗೆ ಜಮಾಯಿಸಿತ್ತು.

ಇಡೀ ದಿನ ಕಾದು ರಾತ್ರಿ ರಾಮ್ ಲಲ್ಲಾ ವಿಗ್ರಹವನ್ನು ಎಟಿಎಸ್ ಕಮಾಂಡೋಗಳ ಮೇಲ್ವಿಚಾರಣೆಯಲ್ಲಿ ಜನ್ಮಭೂಮಿ ಸಂಕೀರ್ಣಕ್ಕೆ ಕಳುಹಿಸಲಾಯಿತು. ಆದರೆ, ಎಲ್ಲ ಕಡೆಯಿಂದ ಪಾಲಿಥಿನ್ ಹೊದಿಸಿದ್ದರಿಂದ ರಾಮಲಲ್ಲಾ ಯಾರಿಗೂ ಕಾಣಲಿಲ್ಲ. ಬಿಗಿ ಭದ್ರತೆಯ ನಡುವೆ ಶ್ರೀರಾಮನ ವಿಗ್ರಹವು ರಾಮಜನ್ಮಭೂಮಿ ಸಂಕೀರ್ಣ ಪ್ರವೇಶಿಸಿತು.

ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ 51 ಇಂಚಿನ ಶ್ರೀರಾಮನ ಕಡುಬಣ್ಣದ ಪ್ರತಿಮೆಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಆಯ್ಕೆ ಮಾಡಲಾಗಿದೆ. ಈ ​​ಪ್ರತಿಮೆಯನ್ನು ವಿವೇಕ ಸೃಷ್ಟಿ ಆಶ್ರಮದ ಸಂಕೀರ್ಣದಲ್ಲಿ ಮಾಡಲಾಗಿದೆ. ಅದರ ನಂತರ, ಬುಧವಾರ, ಈ ವಿಗ್ರಹವನ್ನು ಬಿಗಿ ಭದ್ರತೆಯಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಕಡೆಗೆ ಕಳುಹಿಸಲಾಯಿತು. 

ಮೂರ್ತಿಯನ್ನು ಆವರಣದೊಳಗೆ ತರುವಾಗ ಬಿಗಿ ಭದ್ರತೆ ಇತ್ತು. ಎಟಿಎಸ್ ಕಮಾಂಡೋಗಳು ಪ್ರತಿಮೆಯನ್ನು ಮೇಲ್ವಿಚಾರಣೆ ನಡೆಸಿರುವುದು ಕಂಡುಬಂದಿದೆ. ಶ್ರೀರಾಮನ ಈ ವಿಗ್ರಹವನ್ನು ಜನವರಿ 18 ರಂದು ಮಧ್ಯಾಹ್ನ ಹೊಸದಾಗಿ ನಿರ್ಮಿಸಲಾದ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಇದಾದ ನಂತರ ಪ್ರತಿದಿನವೂ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿದ್ದು, ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಶ್ರೀರಾಮನ ವಿಗ್ರಹಕ್ಕೆ ಭೇಟಿ ನೀಡಿ ಆರತಿ ಬೆಳಗಲಿದ್ದಾರೆ.

ಇದನ್ನೂ ಓದಿ:  ರಾಮಮಂದಿರ ಉದ್ಘಾಟನೆಯ ದಿನ ರಜೆ ಘೋಷಿಸಿ: ಸಿಜೆಐಗೆ ಪತ್ರ ಬರೆದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.