'ಟ್ಯೂಶನ್ ಪಡೆದಿಲ್ಲ, ಮನೆಯಲ್ಲೇ ಏಳೆಂಟು ಗಂಟೆ ಓದಿದೆ': SSLC ಟಾಪರ್ ಭೂಮಿಕಾ ಆರ್.ಪೈ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18449732-thumbnail-16x9-tnu.jpg)
ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ನ್ಯೂ ಮೆಕಾಲ ಇಂಗ್ಲಿಷ್ ಸ್ಕೂಲ್ನ ವಿದ್ಯಾರ್ಥಿನಿ ಭೂಮಿಕಾ ಆರ್.ಪೈ ಫುಲ್ ಮಾರ್ಕ್ಸ್ ಪಡೆದಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಹಿ ಹಂಚಿದ ಪೋಷಕರು ಭೂಮಿಕಾ ನಮ್ಮ ಫ್ಯಾಮಿಲಿಯಲ್ಲಿಯೇ ಮೊದಲ ಟಾಪರ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಭೂಮಿಕಾ ಪೈ ಮಾತನಾಡಿ, "ಫಲಿತಾಂಶ ಸಾಕಷ್ಟು ಖುಷಿ ತಂದಿದೆ. ಈ ಸಂದರ್ಭದಲ್ಲಿ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನಾನು ಯಾವುದೇ ಟ್ಯೂಶನ್ ಪಡೆಯುತ್ತಿರಲಿಲ್ಲ. ಮನೆಯಲ್ಲಿಯೇ ಏಳೆಂಟು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದುದು ಸಹಾಯವಾಗಿದೆ. ಪೋಷಕರು, ಶಿಕ್ಷಕರ ಬೆಂಬಲ ಹಾಗೂ ಸಹಕಾರದಿಂದ ಈ ಫಲಿತಾಂಶ ಸಾಧ್ಯವಾಯಿತು. ಈ ಫಲಿತಾಂಶವನ್ನು ನಿಜವಾಗಿಯೂ ನಾನು ನಿರೀಕ್ಷಿಸಿರಲಿಲ್ಲ. ಇದರ ಕ್ರೆಡಿಟ್ ನನ್ನ ಪೋಷಕರು ಹಾಗೂ ಶಿಕ್ಷಕರಿಗೆ ಸಲ್ಲಬೇಕು" ಎಂದು ಖುಷಿ ಹಂಚಿಕೊಂಡರು.
ಇದನ್ನೂ ಓದಿ: SSLCಯಲ್ಲಿ ಶೇ 83.89 ಫಲಿತಾಂಶ: ನಾಲ್ವರಿಗೆ 625ಕ್ಕೆ 625! ಚಿತ್ರದುರ್ಗ ಫಸ್ಟ್; ಯಾದಗಿರಿ ಲಾಸ್ಟ್