ಎಟಿಎಂಗೆ ಹಾಕಲು ತಂದ 1.5 ಕೋಟಿ ಹಣದೊಂದಿಗೆ ಕಾರು ಚಾಲಕ ಪರಾರಿ
🎬 Watch Now: Feature Video
ಪಾಟ್ನಾ (ಬಿಹಾರ) : ಖಾಸಗಿ ಬ್ಯಾಂಕ್ ಎಟಿಎಂಗೆ ತುಂಬಲು ಹಣ ತೆಗೆದುಕೊಂಡು ಹೋಗುತ್ತಿದ್ದ ವಾಹನ ಚಾಲಕ ಬ್ಯಾಂಕಿನ ಹಣದೊಂದಿಗೆ ಪರಾರಿಯಾಗಿರುವ ಘಟನೆ ಪಾಟ್ನಾದ ಅಲಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಡಂಕ ಇಮ್ಲಿ ಗೊಲಂಬರ್ ಎಂಬಲ್ಲಿ ನಡೆದಿದೆ. ಆರೋಪಿ ಸೂರಜ್ ಕುಮಾರ್ ಎಂಬಾತ ಬ್ಯಾಂಕಿನ 1.5 ಕೋಟಿ ರೂಪಾಯಿಯೊಂದಿಗೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಾಸಗಿ ಸಂಸ್ಥೆಯ ಗನ್ ಮ್ಯಾನ್ ಸುಭಾಶ್ ಯಾದವ್, ಆಡಿಟರ್ ಅಮರೇಶ್ ಸಿಂಗ್ ಸೇರಿ ಸೋನುಕುಮಾರ್, ದಿಲೀಪ್ ಕುಮಾರ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇವರು ಡಂಕ ಇಮ್ಲಿ ಗೊಲಂಬರ್ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ ಹಣ ಹಾಕಲು ಬಂದಿದ್ದರು. ಈ ವೇಳೆ ಮೂವರು ಕಾರಿನಿಂದ ಇಳಿದು ಎಟಿಎಂ ಬಳಿಗೆ ಹೋಗಿದ್ದಾರೆ. ಈ ವೇಳೆ ಕಾರು ಚಾಲಕ ಸೂರಜ್ ಕುಮಾರ್ ಸ್ಥಳದಿಂದ ಹಣದೊಂದಿಗೆ ಪರಾರಿಯಾಗಿದ್ದಾನೆ. ಬಳಿಕ ಆರೋಪಿ ಕಾರನ್ನು ಮಾರ್ಗಮಧ್ಯೆ ಬಿಟ್ಟು , ಕಾರಿನಲ್ಲಿದ್ದ 1.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ಜಿಪಿಎಸ್ ಮೂಲಕ ವಾಹನವನ್ನು ಪತ್ತೆ ಹಚ್ಚಿದ್ದು, ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬಿಹಾರದಲ್ಲಿ ಅಗ್ನಿ ಅವಘಡ: 50ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲು