'ವಿಶ್ವ ಶಾಂತಿ' ಸಂದೇಶದೊಂದಿಗೆ ಪುರಿ ಬೀಚ್ನಲ್ಲಿ ಆಕರ್ಷಕ ಮರಳಿನ ಗಣಪ: ವಿಡಿಯೋ - ಮರಳು ಕಲಾವಿದ ಸುದರ್ಶನ್ ಪಟ್ನಾಯಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/19-09-2023/640-480-19548743-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 19, 2023, 10:46 AM IST
ಪುರಿ(ಒಡಿಶಾ): ಗಣೇಶೊತ್ಸವದ ಪ್ರಯುಕ್ತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ನಲ್ಲಿ ಮರಳು ಮತ್ತು ಸ್ಟೀಲ್ ಪರಿಕರಣಗಳನ್ನು ಉಪಯೋಗಿಸಿಕೊಂಡು ಗಣೇಶನ ಆಕರ್ಷಕ ಕಲಾಕೃತಿ ರಚಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಟ್ನಾಯಕ್, "ಪ್ರತಿ ವರ್ಷ ಗಣೇಶೋತ್ಸವಕ್ಕಾಗಿ ಏನಾದರೂ ವಿಶೇಷವಾದುದನ್ನು ಮಾಡುತ್ತೇನೆ. ಈ ಬಾರಿ ರಚಿಸಿರುವ ಕಲಾಕೃತಿಗೆ ಮರಳು ಮತ್ತು ಸ್ಟೀಲ್ ಬಳಸಲಾಗಿದೆ. ‘ವಿಶ್ವಶಾಂತಿ’ಯ ಸಂದೇಶವನ್ನೂ ರವಾನಿಸಿದ್ದೇನೆ" ಎಂದು ಹೇಳಿದರು.
ಮರಳು ಗಣಪನ ಪಕ್ಕ ಮೂಷಿಕನನ್ನೂ ನೋಡಬಹುದು. ಸ್ಟೀಲ್ ತಟ್ಟೆಯಿಂದ ಗಣಪ ಎದ್ದು ಬಂದಂತೆ ಕಂಗೊಳಿಸುತ್ತಿದ್ದಾನೆ. ಹಿಂದೂ ಕ್ಯಾಲೆಂಡರ್ನ ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ ಹಬ್ಬವಿದ್ದು, ಶಿವ ಮತ್ತು ಪಾರ್ವತಿಯ ಪುತ್ರ ಗಣೇಶನ ಜನ್ಮದಿನವನ್ನು ಸೂಚಿಸುತ್ತದೆ. ದೇಶದೆಲ್ಲೆಡೆ ಜನರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಗಣೇಶನ ಮೂರ್ತಿ ಪ್ರತಿಷ್ಟಾಪಿಸಿ ಪೂಜೆ, ಪುನಸ್ಕಾರ ಮಾಡುತ್ತಿದ್ದಾರೆ. ಹಲವೆಡೆ ಪರಿಸರಸ್ನೇಹಿ ಗಣಪನಿಗೆ ಮಹತ್ವ ಕೊಡಲಾಗಿದೆ. ಗಣೇಶನ ಉತ್ಸವವು ನಿಮಜ್ಜನೆಯ ಮೂಲಕ ಸಂಪನ್ನಗೊಳ್ಳುತ್ತದೆ.
ಇದನ್ನೂ ಓದಿ: ನ್ಯೂಸ್ ಪೇಪರ್ನಲ್ಲೇ 12 ಅಡಿ ಗಣೇಶನನ್ನು ಪ್ರತಿಷ್ಠಾಪಿಸಿದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು: ಪರಿಸರ ಪ್ರೇಮ ಮೆರೆದ ಮಕ್ಕಳು