ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ತೀರ್ಮಾನ ನೋಡಿ ಆಘಾತವಾಗಿದೆ: ಶಾಸಕ ರಮೇಶ್ ಜಾರಕಿಹೊಳಿ
🎬 Watch Now: Feature Video
ಬೆಳಗಾವಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದಿರುವ ತೀರ್ಮಾನ ನೋಡಿ ಆಘಾತವಾಗಿದೆ ಎಂದು ಶಾಸಕ ರಮೇಶ್ ಜಾರಕಿಹೋಳಿ ಹೇಳಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಶಾಸಕರು, ಕ್ಯಾಬಿನೆಟ್ನಲ್ಲಿ ಡಿಕೆಶಿ ವಿರುದ್ಧದ ಸಿಬಿಐ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿದೆ. ಯಾವುದೇ ಸರ್ಕಾರ ಇರಲಿ ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ. ಅವರು ಡಿಕೆಶಿ ಪ್ರಕರಣದ ವಿಚಾರದಲ್ಲಿ ಕೈ ಗೊಂಡ ತೀರ್ಮಾನ ಆಘಾತಕಾರಿಯಾಗಿದ್ದು, ಖೇದಕರವಾಗಿದೆ ಎಂದರು
ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆ ಫಲಿತಾಂಶ ಮುಗಿದಿದೆ. ನಮ್ಮ ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡಿ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಬಳಿಕ ಕೋರ್ಟ್ಗೆ ಹೋಗುವ ಬಗ್ಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದರು. ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿರುವ ಒಬ್ಬ ಪ್ರಭಾವ ನಾಯಕನ ಹಿಂದೆ 50 ರಿಂದ 60 ಶಾಸಕರು ಇದ್ದಾರೆ ಮತ್ತು ಸರ್ಕಾರ ಬೀಳುವ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಮುಂದೆ ಮಾಹಿತಿ ಗೊತ್ತಾದರೆ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ : ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದಿದ್ದು ನ್ಯಾಯಾಲಯಕ್ಕೆ ಸವಾಲು ಹಾಕುವಂತಿದೆ: ನಾರಾಯಣಸ್ವಾಮಿ