ವಿಶ್ವದ ಅತಿದೊಡ್ಡ ಸಭಾಂಗಣ 'ಯಶೋಭೂಮಿ'ಯ ಮೊದಲ ಹಂತ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ- ವಿಡಿಯೋ - ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್
🎬 Watch Now: Feature Video
Published : Sep 17, 2023, 1:15 PM IST
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಇಲ್ಲಿನ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ 'ಯಶೋಭೂಮಿ'ಯ (ಐಐಸಿಸಿ) ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದರು. ಬೃಹತ್ ಸಭಾಂಗಣಕ್ಕೆ ಯಶೋಭೂಮಿ ಎಂದು ನಾಮಕರಣ ಮಾಡಲಾಗಿದೆ. 1.07 ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಸಭಾಂಗಣವನ್ನು ಭವ್ಯವಾಗಿ ನಿರ್ಮಿಸಲಾಗಿದೆ. ಇಲ್ಲಿ ಬೃಹತ್ ಪ್ರದರ್ಶನ, ವ್ಯಾಪಾರ ಮೇಳ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಭಾಂಗಣವು 1 ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 13 ಇತರ ಸಭಾಂಗಣಗಳು ಸೇರಿ ಒಟ್ಟು 15 ಕನ್ವೆನ್ಷನ್ ಹಾಲ್‌ಗಳನ್ನು ಹೊಂದಿದೆ. ಒಟ್ಟು 11,000 ಪ್ರತಿನಿಧಿಗಳ ಆಸನದ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ದೇಶದಲ್ಲೇ ಅತಿ ದೊಡ್ಡ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ. ಮುಖ್ಯ ಸಭಾಂಗಣವೊಂದೇ 6,000 ಅತಿಥಿಗಳ ಆಸನ ಸಾಮರ್ಥ್ಯ ಹೊಂದಿದೆ. ಮರದ ನೆಲಹಾಸು ಮತ್ತು ಸ್ವಯಂಚಾಲಿತ ಕುರ್ಚಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಗೋಡೆಗಳ ಮೇಲೆ ಧ್ವನಿ ಫಲಕಗಳನ್ನು ಹಾಕಲಾಗಿದ್ದು, ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯದ ಅನುಭವ ನೀಡುತ್ತದೆ.
ಇದನ್ನೂ ಓದಿ : ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ 'ಯಶೋಭೂಮಿ' ಉದ್ಘಾಟನೆಗೆ ಕ್ಷಣಗಣನೆ: ಏನಿದರ ವಿಶೇಷತೆ?